ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು

0
23
loading...

ಗೋಕಾಕ: ಟಿ.ವಿ.ಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಿಂದ ಮೌಲ್ಯಗಳು ಕುಸಿಯುತ್ತಿದ್ದು, ಕೌಟುಂಬಿಕ ಅಶಾಂತಿಗೆ ಕಾರಣವಾಗುತ್ತಿವೆ ಎಂದು ಹಾವೇರಿ ಜಿಲ್ಲೆಯ ಅಗಡಿ ಅಕ್ಕಿ ಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ರಾತ್ರಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ, ಚಿಂತನ ಮಂಥನ ವೇದಿಕೆ ಹಾಗೂ ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಸಯುಕ್ತಾಶ್ರಯದಲ್ಲಿ ಜರುಗಿದ 114ನೇ ಮಾಸಿಕ ಶಿವಾನುಭವಗೋಷ್ಠಿಯಲ್ಲಿ “ಶರಣರ ದೃಷ್ಠಿಯಲ್ಲಿ ಸಂಸ್ಕಾರ” ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಗುರುವಿಗೆ ಉತ್ತಮ ಸಂಸ್ಕಾರ ಕೊಡುವ ಶಕ್ತಿಯಿದ್ದು, ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು. ಬಸವಾದೀ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದು ಅವಶ್ಯಕವಾಗಿದೆ. ಕಾಯಕ ಮತ್ತು ದಾಸೋಹ ಸಿದ್ದಾಂತಗಳನ್ನು ಎಲ್ಲರೂ ಪಾಲಿಸಿದಾಗ ಕಲ್ಯಾಣ ರಾಜ್ಯ ಸ್ಥಾಪನೆ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾದೀಫತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಪಾಲಕರು ಮಕ್ಕಳ ಬೇಡಿಕೆಗಳನ್ನು ತಕ್ಷಣ ಈಡೇರಿಸದೇ ಅವಶ್ಯಕ ವಸ್ತುಗಳಿಗೆ ಆಧ್ಯತೆ ನೀಡಬೇಕು. ಅವುಗಳ ಮಹತ್ವವನ್ನು ತಿಳಿಸಬೇಕೆಂದು ಹೇಳಿದ ಅವರು, ಅವರಲ್ಲಿ ತಪ್ಪುಗಳ ಅರಿವನ್ನು ಅರಿತಾಗ ಇತರರ ನೋವುಗಳನ್ನು ಅರಿತುಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಮಠದಿಂದ ಹಾವೇರಿ ಜಿಲ್ಲೆಯ ಅಗಡಿ ಅಕ್ಕಿ ಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಬಸನಗೌಡ ಪಾಟೀಲ, ಡಾ. ಸಿ.ಕೆ.ನಾವಲಗಿ, ಸುಜಾತಾ ಮುಚ್ಚಂಡಿಹಿರೇಮಠ, ಈರಣ್ಣಾ ವಂಟಮೂರಿಮಠ, ಈಶ್ವರಚಂದ್ರ ಬೆಟಗೇರಿ, ಅನುಸೂಯಾ ಪಾಟೀಲ, ಉಮಾ ತಡಕೋಡ ಇದ್ದರು.
ವೀರಶೈವ ಜಾಗೃತ ಮಹಿಳಾ ವೇದಿಕೆಯವರು ಪ್ರಾರ್ಥಣೆ ನೆರವೇರಿಸಿದರು. ನವಚೇತನ ಶಾಲೆಯ ಮುಖ್ಯೋಪಾದ್ಯಾಯ ಎಸ್.ಕೆ.ಮಠದ ಸ್ವಾಗತಿಸಿ, ವಂದಿಸಿದರು.

loading...