ಗ್ರಂಥಾಲಯಗಳ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸಗಳಾಗಬೇಕು: ಸಚಿವ ಲಮಾಣಿ

0
33
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಕೃಷಿ, ಕೈಗಾರಿಕೆಯಂತಹ ಕ್ಷೇತ್ರಗಳ ಉನ್ನತಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳು ನಡೆಯುತ್ತವೆ, ಆದರೆ ಜ್ಞಾನಾರ್ಜನೆಯ ಗ್ರಂಥಾಲಯಗಳು ಎದುರಿಸುತ್ತಿರುವ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಶನಿವಾರ ಪಟ್ಟಣದಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ನಂತರ ಶ್ರೀಕುಮಾರೇಶ್ವರ ಗುರು ಸದಾಶಿವ ಮಂಗಲ ಭವನದಲ್ಲಿ ನಡೆದ ರಾಜ್ಯಮಟ್ಟದ ಗ್ರಂಥಪಾಲಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನದ ಭರಾಟೆಯಲ್ಲಿ ಗ್ರಂಥಾಲಯಗಳನ್ನು ನಮ್ಮಿಂದ ದೂರವಾಗುತ್ತಿವೆ, ಪುಸ್ತಕ ಪ್ರೇಮ ಮರೆಯಾಗುತ್ತಿದೆ. ಕೆಲವೆಡೆ ಗ್ರಂಥಾಲಯಗಳು ತೆರೆಯಲಾರದ ಸ್ಥಿತಿಯಲ್ಲಿವೆ, ಗ್ರಂಥಾಲಯಗಳ ಉಪಯೋಗ ಎಲ್ಲರೂ ಪಡೆಯಬೇಕು, ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ನಿಡುವ ಹವ್ಯಾಸ ಬೆಳೆಯಬೇಕು ಎಂದ ಅವರು, ಗ್ರಂಥಪಾಲಕರ ಸೇವಾ ನಿರ್ಲಕ್ಷತೆಯ ಬಗೆಗಿನ ದೂರುಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಗ್ರಂಥಾಲಯಗಳನ್ನು ವ್ಯವಸ್ಥಿವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಸಮಾವೇಶ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿ, ಜ್ಞಾನಾಭಿವೃದ್ಧಿಗೆ ಗ್ರಂಥಾಲಯಗಳು ಉಪಯುಕ್ತವಾಗಿವೆ, ಬಳಸಿದಷ್ಟು ಗ್ರಂಥಗಳು ತಮ್ಮ ಮೌಲ್ಯಗಳನ್ನು ಬಿಂಬಿಸುತ್ತವೆ, ಗ್ರಂಥಾಲಯಗಳು ಆಕರ್ಷಕವಾಗಬೇಕು. ಆ ಮೂಲಕ ಗ್ರಂಥಾಲಯ ಆಸಕ್ತಿ ಬೆಳೆಯಬೇಕು ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಮಾತನಾಡಿ, ಇದೇ ಮೊದಲ ಬಾರಿಗೆ ತಾಲೂಕು ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಗ್ರಂಥಪಾಲಕರ ಸಮಾವೇಶವು ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಮನೋಹರ ತಹಸೀಲ್ದಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೆಗಣ್ಣಿ ಮಾತನಾಡಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಘವೇಂದ್ರ ತಹಸೀಲ್ದಾರ್, ಟಾಕನಗೌಡ ಪಾಟೀಲ, ಹಾನಗಲ್ಲ ಬ್ಲಾಕ್ ಕಾಂಗರೆಸ್ ಅಧ್ಯಕ್ಷ ಆರ್.ಎಸ್ ಪಾಟೀಲ, ಪುರಸಭೆ ಅಧ್ಯಕ್ಷೆ ಹಸಿನಾಭಿ ನಾಯ್ಕನವರ, ಸದಸ್ಯ ಸಂತೋಷ ಸುಣಗಾರ, ಮಖಬೂಲಅಹಮ್ಮದ ಸರ್ವಿಕೇರಿ ಇದ್ದರು.
ಗಣ್ಯರಾದ ಪ್ರೊ. ಸಿ.ಎಸ್.ಬಡಿಗೇರ, ಪ್ರಕಾಶಗೌಡ ಪಾಟೀಲ, ವಿಷ್ಣುಕಾಂತ ಜಾಧವ, ಸಾಹಿತಿ ಶೂದ್ರ ಶ್ರೀನಿವಾಸ, ಸಂಕಮ್ಮ ಸಂಕಣ್ಣನವರ, ಶ್ರೀಕಂಠ ಕೂಡಿಗೆ, ಪಿ.ವೈ.ರಾಜೇಂದ್ರ ಕುಮಾರ, ಕೆ.ಜಿ.ವೆಂಕಟೇಶ, ನಾಗರಾಜ ಅಡಿಗ, ತಹಶೀಲ್ದಾರ್ ಶಕುಂತಲಾ ಚೌಗಲಾ, ವೆಂಕಟೇಶ್ವರಿ ಜಿ.ಎಸ್, ಯಾಸಿರ್‍ಖಾನ್ ಪಠಾಣ ಉಪಸ್ಥಿತರಿದ್ದರು.

loading...