ಜಗತ್ತಿನಲ್ಲಿ ಮಾನವ ಜಾತಿ ಒಂದೇ: ಎಸ್.ಬಿ.ಹಳ್ಳಿ

0
30
loading...

ರಾಮದುರ್ಗ: ಶಿಕ್ಷಣ ಪಡೆದವರೆಲ್ಲ ಒಳ್ಳೆಯವರಿರುವದಿಲ್ಲ, ಉನ್ನತ ಶಿಕ್ಷಣ ಪಡೆದವರೇ ಇಂದು ಹೆಚ್ಚಿಗೆ ಭೃಷ್ಟಾಚಾರದಲ್ಲಿ, ತೊಡಗಿದ್ದು ವಿಷಾದನೀಯ ಹಾಗೂ ವೈಜ್ಞಾನಿಕ ಯುಗದಲ್ಲಿ ಇನ್ನೂ ಜಾತಿ ಎಂದು ಬಡಿದಾಡುತ್ತಿದ್ದು ನಾವೆಲ್ಲ ಒಂದು ಜಗತ್ತಿನಲ್ಲಿ ಮಾನವ ಜಾತಿ ಒಂದೇ ಎಂಬ ಭಾವನೆಯಿಂದ ಬಾಳಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಬಿ.ಹಳ್ಳಿ ಹೇಳಿದರು.
ಅವರು ತಿರುಮಲ ಸಭಾಂಗಣದಲ್ಲಿ ಗೆಳೆಯರ ಬಳಗ ಏರ್ಪಡಿಸಿದ ಪಿ.ಎಚ್.ಡಿ ಪದವಿಯಲ್ಲಿ ತೇರ್ಗಡೆಯಾದ ಐನಾಪುರದ ಡಾ.ಶ್ರೀಧರ ಜೋಶಿ, ಹಾಗೂ ಡಾ, ಬಸವರಾಜ ಇಟ್ನಾಳ ಅವರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಕೇವಲ ತಮ್ಮ ಜ್ಞಾನಕ್ಕೆ ಸೀಮಿತಗೊಳಿಸದೆ ಅದು ಸುಸಂಸ್ಕøತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕರೆ ನಿಡಿದರು.
ಡಾ, ಮಹಾಂತೇಶ ಯತ್ನಟ್ಟಿ ಮಾತನಾಡಿ ಪಿಎಚ್‍ಡಿ ಸಾಧಕರು ಸಮಾಜಮುಖಿಯಾಗಿ, ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸುವ ಮನೋಭಾವ ಹೊಂದಬೇಕು, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು ಪ್ರತಿಯೊಂದು ಹಂತದಲ್ಲಿ ಸಮಾಜದ ಕೆಳವರ್ಗದ ಜನರ ಏಳ್ಗೆಗಾಗಿ ಶ್ರಮಿಸಬೇಕು, ವಿದ್ಯಾವಂತ ಬಡಮಕ್ಕಳನ್ನು ಗುರ್ತಿಸಿ ಅವರು ಉನ್ನತ ಶಿಕ್ಷಣ ಪಡೆಯಲು ಸಹಾಯ ಸಹಾಕಾರಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವ್ಹಿ.ಬಿ.ಜಂಬಗಿ, ಸದಾನಂದ ದೊಡಮನಿ, ಮಹೇಶ ಬೀಳಗಿ, ಡಾ.ಮಹಾಂತೇಶ ಹೊಳಿಮಠ, ರಿಯಾಝ ಪಠಾಣ, ವೆಂಕಟೇಶ ಹಿರೆರಡ್ಡಿ, ಈರಣ್ಣಾ ಅಂಗಡಿ, ಡಾ,ಸುಧೀರ ಕುಲಗೋಡ, ಪ್ರವೀಣ ಬಡಿಗೇರ, ಸುನೀಲ ಕರಾಳೆ, ಅಶೋಕ ಇಂಚಲಕರಂಜಿ, ಪ್ರವೀಣ ಸಾಂಗಳೆಕರ, ಗಂಗಾಧರ ಭೋಸಲೆ, ಮಹಾಂತೇಶ ಮಲಕನ್ನವರ, ವೆಂಕಟೇಶ ಕೊಂಡಾ, ಮೃತ್ಯೂಂಜಯ ಸಾಲಿಮಠ, ಎಮ್.ಬಿ.,ಪಾಟೀಲ, ಶಿವಾನಂದ ನರಗುಂದ, ಸಂಜೇಯ ಕಾಗತಿ ಉಪಸ್ಥಿತರಿದ್ದರು, ಶ್ರೀಕಾಂತ ಜಾನಮಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

loading...