ಜೂಜಾಟ, ಮಟಕಾ: 23 ಜನ ಸೆರೆ

0
25
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯ ವಿವಿದೆಡೆ ಮಟಕಾ ಮತ್ತು ಜೂಜಾಟ ದಂಧೆಯಲ್ಲಿ ತೊಡಗಿದ್ದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ 23 ಜನರನ್ನು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ಬೆನಚಿನಮರಡಿ ಗ್ರಾಮದ ರಮೇಶ ಪುಂಡಲೀಕ ಮಾಳಗಿ ಮತ್ತು ಆರು ಜನರು, ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಸದಾಶಿವ ಪರಪ್ಪಾ ಕಾಗೆ, ದರೂರ ಗ್ರಾಮದ ಶಿವಾನಂದ ಮಲ್ಲಪ್ಪಾ ಕಿರಣಗಿ, ನೇಸರಹಿ ಗ್ರಾಮದ ಸೋಮಪ್ಪಾ ಬಸನಿಂಗಪ್ಪ ಹಂಚಿನಮನಿ ಮತ್ತು ಮೂರರು, ಚಿಕ್ಕೋಡಿ ತಾಲೂಕಿನ ಜೈನವಾಡ ಗ್ರಾಮದ ಸಂಜಯ ನಿವೃತ್ತಿ ಸಾಳವೆ ಮತ್ತು ಆರು ಜನರು, ಆಡಿ ಗ್ರಾಮದ ಕಿರಣ ಲಕ್ಷ್ಮಣ ಕಾಂಬಳೆ ಹಾಗೂ ಐದು ಜನರು ಬಂಧಿತರು. ಇವರಿಂದ 12,040 ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗೋಕಾಕ, ಅಥಣಿ, ನೇಸರಗಿ ಮತ್ತು ನಿಪ್ಪಾಣಿ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...