ತಂಗಿಗಾಗಿ ಉಡುಗೊರೆಯಾಗಿ ಶೌಚಾಲಯ ನೀಡಿ

0
25
loading...

ಘಟಪ್ರಭಾ: ಶೌಚಾಲಯ ನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಪ್ರತಿಯೊಂದು ಕುಟುಂಬವು ಶೌಚಾಲಯ ಕಟ್ಟಿಕೊಳ್ಳುವ ಮೂಲಕ ಗ್ರಾಮವನ್ನು ಸ್ವಚ್ಛಂದವಾಗಿಡಲು ಸಾಧ್ಯವೆಂದು ತಾ.ಪಂ ಬಿಸಿಯೂಟ ಅಧಿಕಾರಿ ಎಂ.ಡಿ.ಬೇಗ್ ಹೇಳಿದರು.
ಅವರು ಶನಿವಾರದಂದು ಇಲ್ಲಿಯ ಧುಪದಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ “ರಕ್ಷಾ ಉಡುಗರೆಯಾಗಿ ಶೌಚಾಲಯ” ಸಭೆಯಲ್ಲಿ ನೊಡೆಲ್ ಅಧಿಕಾರಿಯಾಗಿ ಆಗಮಿಸಿ ಮಾತನಾಡಿದರು.
ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನದ ದಿನದಂದು ಅಣ್ಣಂದಿರು ತಂಗಿಗಾಗಿ ಉಡುಗೊರೆಯಾಗಿ ಶೌಚಾಲಯ ನೀಡಬೇಕೆಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಎಸ್.ಐ. ಬೆನವಾಡಿ ಮಾತನಾಡಿ ಬಯರ್ದಿಸೆ ಶೌಚಾಲಯ ಹೆಣ್ಣು ಮಕ್ಕಳ ಮರ್ಯಾದೆಯ ಪ್ರಶ್ನೆಯಾಗಿದ್ದು ಇದರ ಕಡೆಗೆ ಹೆಚ್ಚಿನ ಗಮನ ಹರಿಸಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಲಿಸಬೇಕು ಎಂದರು. ಗ್ರಾ.ಪಂ. ಪಿಡಿಓ ಎಸ್.ಎಚ್. ದೇಸಾಯಿ ಮಾತನಾಡಿ ಆದಷ್ಟು ಬೇಗನೆ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಂಡವರಿಗೆ ಗ್ರಾಮ ಪಂಚಾಯತ ವತಿಯಿಂದ ತಕ್ಷಣ ಶೌಚಾಲಯದ ಬಿಲ್ಲನ್ನು ಪಾವತಿ ಮಾಡಲಾಗುವದು ಎಂದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯ ರಾಜಶೇಖರ ರಜಪೂತ, ಕಾರ್ಯದರ್ಶಿ ಎ.ಎಂ.ಮಾವುತ, ಸಿಬ್ಬಂದಿಗಳಾದ ಸುಭಾಸ ತೆಳಗೇರಿ, ಮಹಾಂತೇಶ ದೊಡ್ಡಲಿಂಗಪ್ಪಗೋಳ, ರಮೀಜಾ ಹುದಲಿ, ಇರ್ಷಾದ ಜಗದಾಳೆ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

loading...