ದೆಹಲಿಯಲ್ಲಿ ಶಂಕಿತ ಉಗ್ರನ ಬಂಧನ

0
20
loading...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಓರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬಂಧಿತನನ್ನು ಬಾಂಗ್ಲಾದೇಶ ಮೂಲದ ರಾಜಾ ಉಲ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಈತ ಅಲ್ ಖೈದಾ ಉಗ್ರ ಸಂಘಟನೆ ಬಾಂಗ್ಲಾ ಘಟಕ ಅನ್ಸರ್ ಬಾಂಗ್ಲಾ ಉಗ್ರ ಸಂಘಟನೆಗೆ ಸೇರಿದವನೆಂದು ಹೇಳಲಾಗಿದೆ. ಕಾರ್ಯಾಚರಣೆ ವೇಳೆ ಈತ ಭಾರತದಿಂದ ನೇಪಾಳಕ್ಕೆ ಅಲ್ಲಿಂದ ಬಾಂಗ್ಲಾಗೆ ತೆರಳು ಸಂಚು ರೂಪಿಸಿದ್ದ. ಆದರೆ ಅಷ್ಟರೊಳಗೇ ದೆಹಲಿಯಲ್ಲಿ ಈತನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಧ್ಯ ದೆಹಲಿ ಪೊಲೀಸರ ವಶದಲ್ಲಿರುವ ಬಂಧಿತನನ್ನು ಪಶ್ಚಿಮ ಬಂಗಾಳ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

loading...