ದೇಶಿಯ ಕ್ರೀಡೆಗಳಿಗೆ ಯುವಕರು ಹೆಚ್ಚಿನ ಮಹತ್ವ ನೀಡಿ: ಶಾಸಕ ದೊಡ್ಡನಗೌ

0
46
loading...

ಕುಷ್ಟಗಿ,ಆ.28: ಯುಕರು ಇಂತಹ ಕ್ರೀಡಾ ಕೂಟಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ನಿಮ್ಮ ಸಾಮಥ್ರ್ಯವನ್ನು ಬೇಳಿಸಿಕೊಳ್ಳು ಬೇಕು. ದೇಶೀಯ ಕ್ರೀಡೆಗಳಿಗೆ ಯುವಕರು ಹೆಚ್ಚಿನ ಮಹತ್ವ ನೀಡುವದರಿಂದ ದಯಹಿಕವಾಗಿ ಸದೃಡವಾಗಿ ಮುಂದೆ ಬರಬೇಕು ಅಂದಾಗ ಮಾತ್ರ ನಿಮ್ಮ ಕನಸು ಸಹಕಾರಗೊಳ್ಳುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಜಿಲಕ್ಲಾ ಸಬಲಿಕರಣ ಮತ್ತು ಕ್ರಿಡಾ ಇಲಾಖೆ ಕೊಪ್ಪಳ ಮತ್ತು ಕುಷ್ಟಗಿ ಇವರುಗಳ ಸಂಯುಕತ್ ಆಶ್ರಯದಲ್ಲಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಸದ್ಘಾಟಿಸಿ ಮಾತನಾಡುತ್ತ. ಯುವಕರಲ್ಲಿ ಕ್ರೀಡಾ ಮನೋಭಾವ ಕಡೆಯಾಗಿದೆ ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಳ್ಳುವುದಿಲ್ಲಾ. ಹಿಂದಿನ ಕಾಲದಲ್ಲಿ ಗ್ರಾಮೀಣ ಆಟಗಳಾದ ಕಬ್ಬಂಡಿ, ಖೋಖೋ ಗುಂಡು ಎಸೆತ ಇನ್ನು ಮುಂತಾದ ಕಠಿಣವಾದ ಆಟಗಳನ್ನು ಆಡುತ್ತಿದ್ದರಿಂದ ಸದೃಡವಾಗಿರುತ್ತಿದ್ದರು. ಇಂದಿನ ಕಾಲದಲ್ಲಿ ಎಲೆಕ್ಟ್ರಾನಿಕ ಆಟಗಳಿಗೆ ಮಾರು ಹೋಗಿ ತಮ್ಮ ಬುದ್ದಿ ಮಟ್ಟ್ವನ್ನು ಕುಂಟಿತಗೊಳಿಸಿಕೊಳ್ಳುತ್ತಿದ್ದಾರೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಅಡಗಿರುವದರಿಂದ ದೇಶಿ ಕ್ರೀಡೆಗಳಿಗೆ ಮಹತ್ವ ನೀಡಿ ಕನಸು ನೆನಸಾಗಿಸಿಕೊಳ್ಳಿ ಎಂದು ತಿಳಿಸಿದರು
ಈದೆ ಸಂದರ್ಭದಲ್ಲಿ ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ ಸದಸ್ಯ ಕೆ. ಮಹೇಶ ಮಾತನಾಡಿದರು ಈ ಸಂದರ್ಭದಲ್ಲಿ ಭೀಮಣ್ಣ ಅಗಸಿಮುಂದಿನ್, ವಿಜಯ ನಾಯಕ, ತಾಲೂಕಾ ಪಂಚಾಯತ ಅಧ್ಯಕ್ಷೆ ಮಹಾಂತಮ್ಮ ಕೆ. ಪೂಜಾರ, ಎಪಿಎಂಸಿ ಅಧ್ಯಕ್ಷ ಬಾಲಪ್ಪ ಚಾಕ್ರಿ, ತಾಲುಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ  ಮೋಹನ್, ಯುವಜನ ಕ್ರೀಡಾ ಇಲಾಖೆಯ ಸಂಯೋಜಕರಾದ ಮಹಾಂತೇಸ ಜಾಲಿಗಿಡ, ಮಾರುತಿ ದಮ್ಮೂರ, ವಿಜಯ ಕುಮಾರ ಜಾಲಿಹಾಳ, ಬಸವರಾಜ ಎಲಿಗಾರ ಮುಂತಾದವರು ಭಾಗವಹಿಸಿದ್ದರು.

loading...