ಪರದೇಶಿಯರನ್ನು ಅಂಗಲಾಚಿ ಕರೆತರುವ ಪ್ರಯತ್ನ ಅಪಾಯಕಾರಿ: ಡಾ. ಸಿದ್ದನಗೌಡ  

0
36
loading...

ಕನ್ನಡಮ್ಮ ಸುದ್ದಿ-ಧಾರವಾಡ: ಪರದೇಶಿಯರನ್ನು ಅಂಗಲಾಚಿ ಕರೆತರುವ ಮತ್ತು ಅವರಿಗಾಗಿ ಭೂಮಿ, ನೀರು, ವಿದ್ಯುತ್ ಮುಂತಾದ ಅಪರಿಮಿತ ಸೌಲಭ್ಯ ಒದಗಿಸಲು ನಮ್ಮ ಪ್ರಭುತ್ವ ಮುಂದಾಗಿರುವದು ಪ್ರಜಾಪ್ರಭುತ್ವವನ್ನು ಅಣಕಿಸುವಂತಿದ್ದು, ಈ ವಿಪರ್ಯಾಸವನ್ನು ಜನಸಾಮಾನ್ಯರು ಅನುಭವಿಸುತ್ತಿರುವುದು ಅಪಾಯಕಾರಿಯಾಗಿದೆ  ಎಂದು ಹೊಸತು ಮಾಸಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ ಅಭಿಪ್ರಾಯಪಟ್ಟರು.ಕರ್ನಾಟಕ ವಿದ್ಯಾವರ್ಧಕ ಸಂಘವು ಕ್ಯಾಪ್ಟನ್ ಬಿ. ಸಿ. ಕಲ್ಮಠ ಸಂಸ್ಮರಣ ದತ್ತಿ ಅಂಗವಾಗಿ ಆಯೋಜಿಸಿದ್ದ `ಸ್ವಾತಂತ್ರ್ಯ ಸಂಗ್ರಾಮದ ಮರೆಯಲಾಗದ ಮಹನೀಯರು’ ಕುರಿತು ಮಾತನಾಡಿದರು. ಚಲೇಜಾವ್ ಚಳುವÀಳಿಯ 75 ನೇ ವರ್ಷಾಚರಣೆಯ ಸಂಭ್ರಮದಲ್ಲಿಂದು  ಚಲೇಆವ್ ಎನ್ನುವಂತಹ ವಾತಾವರಣ ನಿರ್ಮಾಣವಾದದ್ದು ಕಳವಳಕಾರಿ ಸಂಗತಿ. ಯಾವೆಲ್ಲ ಆಶಯಗಳಿಗಾಗಿ ನಾವು ಚಲೇಜಾವ್ ಘೋಷಣೆ ಮೊಳಗಿಸಿದೆವು ಅವೇ ಆತಂಕಕಾರಿ ಅಂಶಗಳೊಡನೆ ನಮ್ಮ ದೇಶದ ಯಾವುದೇ ಪಕ್ಷದ ಪ್ರಧಾನಿಗಳು ಬಂಡವಾಳ ಹೂಡಲು ದಯವಿಟ್ಟು ಬನ್ನಿ ಎಂದು ನಮ್ಮ ರಾಜಕೀಯ ಧುರೀಣರು ಕರೆಯುತ್ತಿದ್ದಾರೆ. ಪರದೇಶಿಯರ ಬಂಡವಾಳದಿಂದ ಸಾಧ್ಯವಾಗುವಂತಿದ್ದರೆ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ನಮ್ಮ ಹಿರಿಯರು ಯಾಕಾಗಿ ತ್ಯಾಗ, ಬಲಿದಾನ ಮಾಡಿದರು ಎಂಬುದೇ ಅರ್ಥವಾಗುತ್ತಿಲ್ಲ ಎಂದರು.ರÀಂಗಾಯಣದ ಆಡಳಿತಾಧಿಕಾರಿ ಬಸವರಾಜ ಹೂಗಾರ ಮಾತನಾಡಿ, ಬ್ರಿಟೀಷರು ವ್ಯಾಪಾರಕ್ಕಾಗಿ ತಂದ ತಕ್ಕಡಿಯನ್ನು ನಮ್ಮಲ್ಲಿಯೇ ಬಿಟ್ಟುಹೋಗಿದ್ದಾರೆ. ಹೀಗಾಗಿ ನಾವಿಂದು ಇನ್ನೂ ಊಳಿಗಮಾನ್ಯ ಮಾನಸಿಕತೆಯಿಂದ ಹೊರಬಂದಿಲ್ಲ. ಬ್ರಿಟೀಷರನ್ನು ಭೌತಿಕವಾಗಿ ಹೊರದೂಡಿ ರಾಜಕೀಯ ಸ್ವಾತಂತ್ರ್ಯವನ್ನೇನೋ ಗಳಿಸಿದೆವು. ಆದರೆ ಸಾಮಾಜಿಕ, ಆರ್ಥಿಕ ಅಸಮಾನತೆಗಳಿಂದ 7 ದಶಕಗಳ ಸ್ವಾತಂತ್ರ್ಯದ ನಂತರವೂ ನಾವು ಹೊರಬರಲಾಗಿಲ್ಲವೆಂಬುದು ವಿಷಾದನೀಯ ಎಂದರು.   ಕೃಷಿಕ ಹನುಮಂತಗೌಡ ಮುದಿಗೌಡರ, ಡಾ. ನಿಂಗು ಸೊಲಗಿ, ಶ್ರೀಮತಿ ಶಾರದಾ ಕಲ್ಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಂಭಯ್ಯ ಹಿರೇಮಠ  ಹಾಗೂ ಶಂಕರಣ್ಣ ಸಂಕಣ್ಣವರ ತಂಡದವರು ದೇಶಭಕ್ತಿ ಹಾಗೂ ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಿದರು.

loading...