ಪ್ರತಿಯೊಬ್ಬರೂ ಮನೆಗಳಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಿ

0
22
loading...

ಬೆಟಗೇರಿ: ಪ್ರತಿಯೊಬ್ಬ ಮನುಷ್ಯನು ಆರೋಗ್ಯದ ಹಿತದೃಷ್ಠಿಯಿಂದ ಸ್ವಚ್ಛತೆ ಕಾಪಾಡಿಕೊಳ್ಳುವದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮದ ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶೌಚಾಲಯ ಕಟ್ಟಿಕೊಳ್ಳುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದ ಜನರು ಬಹಿರ್ದೆಸೆಗೆ ಹೋಗುವದನ್ನು ನಿರಾಕರಿಸಲು ಮುಂದಾಗಬೇಕಿದೆ. ಮನೆಯಲ್ಲಿ ಶೌಚಾಲಯ ಇಲ್ಲದಕ್ಕೆ ಮಹಿಳೆಯರು, ಮಕ್ಕಳು ಊರಿನ ಸುತ್ತಲಿನ ರಸ್ತೆ ಬದಿಯನ್ನು ಬಹಿರ್ದೆಸೆಗೆ ಬಳಸುತ್ತಿದ್ದಾರೆ ಎಂದರು.
ಸ್ಥಳೀಯ ಈ ರಸ್ತೆಗಳ ಮೇಲೆ ದಿನ ಬೆಳಗಾದರೆ ನೂರಾರು ಜನ ನಡೆದಾಡುವದರಿಂದ ಈ ರಸ್ತೆ ಬದಿಯಲ್ಲಿ ಬಯಲು ಬಹಿರ್ದೆಸೆ ಮಾಡುವ ಮಹಿಳೆಯರಿಗೆ ಬಹಳ ತೊಂದರೆ, ಮುಜಗುರಕೊಳಗಾಗುವ ಪರಿಸ್ಥಿತಿ ಬಂದೊಂದಿಗಿದೆ.ಹೀಗಾಗಿ ಸ್ಥಳೀಯ ಅಕ್ಷರಸ್ಥ ಮಹಿಳೆಯರು, ಶಾಲಾ ಮಕ್ಕಳು ಮನೆಯಲ್ಲಿ ಶೌಚಗೃಹ ನಿರ್ಮಿಸಿಕೊಡುವಂತೆ ಮನೆಯಲ್ಲಿಯ ಹಿರಿಯರಿಗೆ, ಪಾಲಕರಿಗೆ ತಿಳುವಳಿಕೆ ಮೂಡಿಸಬೇಕು. ಶೌಚಾಲಯ ನಿರ್ಮಿಸಿಕೊಂಡವರಿಗೆ ಸರಕಾರ ಸಹಾಯಧನ ನೀಡಲಿದೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಹನುಮಂತ ವಡೇರ, ಶಂಕರ ಕೋಣಿ, ಲಕ್ಕಪ್ಪ ಚಂದರಗಿ, ಮಾರುತಿ ಚಂದರಗಿ, ಶಿವಪ್ಪ ಕುಳಲಿ, ಮಲ್ಲಪ್ಪ ಪಣದಿ, ವಿಠಲ ಕೋಣಿ, ಬಸವರಾಜ ಮಾಳೇದ ಸೇರಿದಂತೆ ಇತರರು ಇದ್ದರು.

loading...