ಪ್ರಧಾನ ಮಂತ್ರಿ ಉಜ್ವಲ ಯೋಜನೆ ದೇಶದ ಮಹಿಳೆಯರಿಗೆ ವರಧಾನವಾಗಿದೆ

0
57
loading...

ಗೋಕಾಕ: ಸಾಮಾನ್ಯ ಜನರಿಗಾಗಿ ಹಾಗೂ ವಿಶೇಷವಾಗಿ ಕಡುಬಡ ಕುಟುಂಬಗಳಿಗೆ ನೇರವಾಗಿ ಕೇಂದ್ರ ಸರಕಾರದ ಸೌಲಭ್ಯಗಳು ಮುಟ್ಟುವಂತೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದೇಶದ ಹೆಣ್ಣು ಮಕ್ಕಳಿಗೆ ವರಧಾನವಾಗಿ ಪರಿಣಮಿಸಿದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಹೇಳಿದರು.
ತಾಲೂಕಿನ ತೆಗಳಿನಹಟ್ಟಿ ಗ್ರಾಮದಲ್ಲಿ ಉಜ್ವಲ ಯೋಜನೆಯಡಿ ಪಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿ ಮಾತನಾಡಿದ ಅವರು, ಸರಕಾರದ ಯೋಜನೆಗಳು ನೇರವಾಗಿ ಪಲಾನುಭವಿಗಳಿಗೆ ತಲುಪಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನೇಕ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಮಧ್ಯವರ್ತಿಗಳು ಪಲಾನುಭವಿಗಳ ಸೌಲಭ್ಯ ಮತ್ತು ಅನುಧಾನದಲ್ಲಿ ಪಾಲು ಪಡೆಯದಂತೆ ನಿರ್ಭಂಧಿಸುವ ಸದುದ್ದೇಶದಿಂದಲೇ ಸರಕಾರದ ಸೌಲಭ್ಯದ ಹಣ ನೇರವಾಗಿ ಪಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯವಾಗುವಂತೆ ಮಾಡುವ ಉದ್ದೇಶದಿಂದಲೇ ಕೇಂದ್ರ ಸರಕಾರ ಜನಧನ ಖಾತೆಗಳನ್ನು ತೆರೆಯುವಂತೆ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದ ಅವರು ಉಜ್ವಲ ಯೋಜನೆಯಡಿಯಲ್ಲಿ ನೀಡುತ್ತಿರುವ ಗ್ಯಾಸ್ ಸಿಲಿಂಡರ್ ಸಂಪೂರ್ಣ ಉಚಿತವಾಗಿದ್ದು, ಪಲಾನುಭವಿಗಳು ಮಧ್ಯವರ್ತಿಗಳಿಂದ ಎಚ್ಚರವಾಗಿರಬೇಕೆಂದು ಹೇಳಿದರು.
ಮಾಜಿ ಶಾಸಕ ಎಮ್.ಎಲ್. ಮುತ್ತೆನ್ನವರ ಮಾತನಾಡಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಮುಂದಾಲೋಚನೆಯ ಕಾರ್ಯವೈಖರಿಯಿಂದಾಗಿ ಪರಿಣಾಮಕಾರಿಯಾಗಿ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಹತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಸಂಕಷ್ಟಗಳಿಗೆ ಕೊನೆಹಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಮರಲಿಂಗನ್ನವರ, ಮುಖಂಡರಾದ ರಾಜುಗೌಡ ನಿರ್ವಾಣಿ, ಗೋಪಾಲ ಪಾಟೀಲ. ಲಕ್ಷ್ಮಣ ಕರಮುಶಿ. ಲಕ್ಷ್ಮಣ ಕರಮುಶಿ, ನಿಂಗಪ್ಪ ಅಮ್ಮಿನಭಾವಿ, ಕಾಡಪ್ಪಾ ಪಾಟೀಲ, ನಾಗಪ್ಪ ಕೊಪ್ಪದ, ಬಸವರಾಜ ನಾಯಿಕ ಸೇರಿದಂತೆ ಅನೇಕರು ಇದ್ದರು.

loading...