ಬಯಲು ಬಹಿರ್ದೆಸೆ ಸಪ್ತಾಹ

0
16
loading...

ಹುಕ್ಕೇರಿ. 12: 71 ನೇ ಸ್ವಾತಂತ್ರೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಬಯಲು ಬಿಹಿರ್ದೆಸೆ ಮುಕ್ತ ಸ್ವಾತಂತ್ರ ಸಪ್ತಾಹ ಜಾಥಾ ಕಾರ್ಯಕ್ರಮವನ್ನು ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಸರಗುಪ್ಪಿ ಗ್ರಾಮದಲ್ಲಿ ಆಚರಿಸಲಾಯಿತು. ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಹೊಳೆಪ್ಪಗೋಳ ಅವರು, ಜಿಲ್ಲಾ ಪಂಚಾಯತಿ ಸಿಇಓ ರಾಮಚಂದ್ರರಾವ ಬೆಳಗಾವಿ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಡುತ್ತಿರುವ ಶ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು. ಶೌಚ ನಿರ್ಮಾಣಕ್ಕಾಗಿ ಬರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನವನ್ನು ಪಡೆದುಕೊಂಡು ಪ್ರತಿ ಮನೆಯಲ್ಲೀ ಶೌಚ ಗ್ರಹ ನಿರ್ಮಾಣ ಮಾಡಿಕೊಳ್ಳುವಂತೆ ಕರೆ ನೀಡಿದರು. ಬಹಳಷ್ಟು ಜನರು ಶೌಚಾಲಯಗಳಿದ್ದರೂ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮಾಡಿಸಲಾಗುತ್ತಿದೆ. ಆದರೂ ಶೌಚ ಇದ್ದರೂ ಬಯಲಿಗೆ ಹೋಗುವರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಪ್ರಜ್ಞಾವಂತರು ಮಾಡಬೇಕು. 70 ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಬಯಲು ಬಹಿರ್ದೆಸೆ ಸಪ್ತಾಹವನ್ನು ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನೇರ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ್ಯ ನಜೀರಬೇಗ್ ಇನಾಮದಾರ, ಗ್ರಾಮ ಪಂಚಾಯತಿ ಸದಸ್ಯರಾದ ನಿತೀನ ಜಾಧವ, ಅಸ್ಲಂ ಭಾಗವಾನ, ಕೆಂಪಣ್ಣಾ ಕಾಂಬ್ಳೆ, ಶಿವರಾಮ ವಡ್ಡರ, ಅನೀಲ ಹುಕ್ಕೇರಿ, ವಿಕ್ರಮ ರಾಯನ್ನವರ, ಗ್ರಾಮದ ಮುಖಂಡ ಇಲಿಯಾಸ ಬೇಗ್ ಇನಾಮದಾರ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಜಾಥಾದಲ್ಲಿ ಭಾಘವಹಿಸಿದ್ದರು.

loading...