ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟಕ್ಕೆ ಎಚ್ಚರಿಕೆ

0
19
loading...

ಇಳಕಲ್ : ರಾಜ್ಯ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ 20 ಬೇಡಿಕೆಗಳನ್ನು ಸರಕಾರ ಈಡೇರಿಸದೆ ಹೋದಲ್ಲಿ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ವತಿಯಿಂದ ಉಗ್ರ ಹೋರಾಟ ಮಾಡಲಾಗುವದು ಎಂದು ತಾಲೂಕಾ ಅಧ್ಯಕ್ಷ ಡಾ,ಕೆ,ವಿ, ಅಕ್ಕಿ ಹೇಳಿದರು.
ಇಲ್ಲಿಯ ಎಸ್‍ವಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಸಾಕಷ್ಟು ಬಾರಿ ಮನವಿಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಅತ್ತ ಗಮನ ಹರಿಸುತ್ತಿಲ್ಲ ಅದಕ್ಕಾಗಿ ಉಗ್ರ ಹೋರಾಟವನ್ನು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಹೋರಾಟದ ಮೊದಲ ಹಂತದಲ್ಲಿ ಅಗಸ್ಟ 11 ರಂದು ತಾಲೂಕಾ ಮಟ್ಟದಲ್ಲಿ ಮನವಿ ಪತ್ರವನ್ನು ತಹಸೀಲ್ದಾರ ಅವರಿಗೆ ಒಕ್ಕೂಟದ ವತಿಯಿಂದ ಸಲ್ಲಿಸಲಾಗುವದು ನಂತರ ಅಗಸ್ಟ 19 ರಂದು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಇದಕ್ಕೂ ಸರಕಾರ ಪ್ರತಿಕ್ರಿಯೆ ನೀಡದೆ ಹೋದಲ್ಲಿ ಅಗಸ್ಟ 21 ರಿಂದ ಅನಿರ್ದಿಷ್ಟ ಕಾಲ ಶಾಲಾ – ಕಾಲೇಜುಗಳನ್ನು ಬಂದು ಮಾಡಿ ಹೋರಾಟವನ್ನು ಮಾಡಲಾಗುವದು ಎಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಸಭೆಯಲ್ಲಿ ಎಂ,ವಿ,ಪಾಟೀಲ, ಅಶೋಕ ಬಿಜ್ಜಳ, ಎಂ,ಬಿ,ಹೊಕ್ರಾಣಿ, ಮಹಾಂತೇಶ ತೆನಹಳ್ಳಿ, ಬಂಡು ಕಟ್ಟಿ, ಮಹಾಬಳೇಶ ಕೊಡಗಲಿ, ವಿ,ವಿ,ಅಲೇಗಾವಿ, ತುಕಾರಾಮ ರಾಮದುರ್ಗ, ಐಡಿಯಲ್ ಗಬ್ಬೂರ, ಮಲ್ಲಿಕಾರ್ಜುನ ಇದರಂಗಿ, ಎಚ್,ಎಮ್,ಹುಲ್ಲಿಕೇರಿ, ವೇಣು ಕುಂಟೋಜಿ, ಬಿ,ಎಸ್,ಮಾದರ ಮತ್ತಿತರರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೀರೇಶ ಶೆಟ್ಟರ ಸ್ವಾಗತಿಸಿದರು. ಬಸವರಾಜ ಸುಗ್ಗಮದ ವಂದಿಸಿದರು.

 

loading...