ಬೈಕ್ ಮುಖಾಮುಖಿ ಡಿಕ್ಕಿ: ಯೋಧ ಸಾವು

0
29
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಕಿತ್ತೂರಿ ತಾಲೂಕಿನ ಕಲಬಾವಿ ಕ್ರಾಸ್ ಹತ್ತಿರ ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯೋಧ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಮಹಾಂತೇಶ ಮಡಿವಾಳಪ್ಪ ಹಕಾರಿ (26) ಎಂಬ ಮೃತ ಯೋಧ. ಕಿತ್ತೂರಿಗೆ ಹೋಗಿ ವಾಪಸ್ ಬರುವ ಸಮಯದಲ್ಲಿ ಅವಘಡ ಸಂಭವಿಸಿದೆ. ಸಿಆರ್‍ಪಿಎಫ್ ಯೋಧನಾಗಿ ಛತ್ತೀಸಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ. 15 ದಿನಗಳ ರಜೆಗೆ ಬಂದಿದ್ದ ಅಪಘಾತದಲ್ಲಿ ತಲೆಗೆ ತ್ರೀವ ಗಾಯಗೊಂಡಿದ ನಗರದ ಕೆಎಲ್‍ಈ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...