ಭದ್ರಕಾಳಿ ಮಾತೆಯ ಕಂಚಿನ ಮೂರ್ತಿಗಳ ಪಲ್ಲಕ್ಕಿ ಉತ್ಸವ

0
30
loading...

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇದೇ ಆಗಸ್ಟ 7 ರಂದು ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭನೆಯಿಂದ ನಡೆದವು.
ಬೆಳಗ್ಗೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ ಭಕ್ತಿಭಾವದಿಂದ ಜರುಗಿ, ಮುಂಜಾನೆ 8 ಗಂಟೆಗೆ ಆರತಿ, ಕುಂಭಮೇಳ, ಕರಡಿ ಮಜಲು ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಹಾಗೂ ಶ್ರೀ ವೀರಭದ್ರೇಶ್ವರ ದೇವರ ಒಡಪು ಪುರವಂತರು ಹೇಳುವದರೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಹಾಗೂ ಭದ್ರಕಾಳಿ ಮಾತೆಯ ಕಂಚಿನ ಮೂರ್ತಿಗಳ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನಡೆಯಿತು.
ನಂತರ ಪುರಜನರಿಂದ ನೈವೇದ್ಯ ಅರ್ಪಿಸುವ, ಮತ್ತು ಪೂಜೆ, ಪುನಸ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದ ನಂತರ ಮಹಾಪ್ರಸಾದ ನಡೆದು, ಜಾತ್ರಾ ಮಹೋತ್ಸವ ಸಮಾರೂಪಗೊಂಡಿತು.
ರಾಮದುರ್ಗ ತಾಲೂಕಿನ ಭಾಗೋಜಿಕೊಪ್ಪ ಹಿರೇಮಠದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಈ ಎಲ್ಲ ಕಾರ್ಯಕ್ರಮದ ದಿವ್ಯ ಸಾನಿಧ್ಯ, ಬೆಟಗೇರಿ ಗ್ರಾಮದ ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ ಕಾರ್ಯಕ್ರಮ ನೇತೃತ್ವ ವಹಿಸಿದ್ದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ರಾಮಣ್ಣ ಮುಧೋಳ, ಅರ್ಜುನ ಅಂದಾನಿ, ಪುಂಡಲಿಕಪ್ಪ ಪಾರ್ವತೇರ, ಬಸಪ್ಪ ದೇಯನ್ನವರ, ಮಲ್ಲಪ್ಪ ಪಣದಿ, ಅಪ್ಪಣ್ಣ ಖಡಕಭಾವಿ, ಬಸವರಾಜ ಪಣದಿ, ಮಹಾಂತೇಶ ದಂಡಿನ, ಭೀಮಶೆಪ್ಪ ಬಳಿಗಾರ, ಈರಣ್ಣ ಸಿದ್ನಾಳ, ಅಡಿವೆಪ್ಪ ಮುರಗೋಡ, ಬಸು ಸಿದ್ನಾಳ, ಈರಪ್ಪ ದೇಯನ್ನವರ, ಶಿವಲಿಂಗ ಜಾಡರ, ಶ್ರೀಶೈಲ ಗಾಣಗಿ, ಮಹಾಂತೇಶ ಪಡಶೆಟ್ಟಿ, ಮುತ್ತೆಪ್ಪ ದಂಡಿನ, ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಸದಸ್ಯರು, ಪದಾಧಿಕಾರಿಗಳು, ಅಕ್ಕಿಸಾಗರ, ಗೋಸಬಾಳ, ಬೆಟಗೇರಿ ಗ್ರಾಮಗಳ ಪುರವಂತರು, ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...