ಮಟಕಾ, ಜೂಜಾಟ: ಹತ್ತು ಜನ ಸೆರೆ

0
15
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ನಿಪ್ಪಾಣಿ ಮತ್ತು ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ಮತ್ತು ಮಟಕಾ ಆಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಹತ್ತು ಜನರನ್ನು ಬಂಧಿಸಿದ್ದಾರೆ.
ಹಾರುಗೊಪ್ಪದ ವಿನಾಯಕ ರುದ್ರಪ್ಪಾ ದೊಡ್ಡಹೊನ್ನಪ್ಪನ್ನವರ ಮತ್ತು ನಿಪ್ಪಾಣಿಯ ಕುಮಾರ ಅಪ್ಪಾಸಾಹೇಬ ಪಾಟೀಲ, ಜೂಜಾಟ ಆಡುತ್ತಿದ್ದ ಬೋಳೆವಾಡಿ ಗ್ರಾಮದ ಅನೀಲದೇವಪ್ಪಾ ಮಂಗಾವತೆ ಮತ್ತು ಮೂವರು, ಅರುಣ ದೀಪಕ ಪಾಟೀಲ ಮತ್ತು ಮೂವರು ಎಂಬಾತರು ಬಂಧಿತರು. ಇವರಿಂದ 5260 ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ ಮತ್ತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

loading...