ಮಟಕಾ, ಜೂಜಾಟ: 17 ಜನ ಸೆರೆ

0
16
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಚಿಕ್ಕೋಡಿ ತಾಲೂಕಿನ ಅಂಕಲಿ ಮತ್ತು ನೇಜ ಗ್ರಾಮದಲ್ಲಿ ಮಟಕಾ ಮತ್ತು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ 17 ಜನರನ್ನು ಬಂಧಿಸಿದ್ದಾರೆ.
ಅಂಕಲಿ ಗ್ರಾಮದ ರಮಾಜಾನ್ ಅಬ್ಬಾಸ ಅಲಿ ದೇಸಾಯಿ, ಅನ್ನಪ್ಪಾ ಬಸವಣ್ಣೆಪ್ಪಾ ತಳವಾರ, ಈರಪ್ಪಾ ಸತ್ಯಪ್ಪಾ ಪೂಜೇರಿ, ಬಸವರಾಜ ಯಲ್ಲಪ್ಪಾ ತಳವಾರ, ರಾಕೇಶ ಬಸಪ್ಪಾ ತಳವಾರ, ಈರಪ್ಪಾ ಬಸ್ಸಪ್ಪಾ ಮರೆಪ್ಪನ್ನವರ ದಶರಥ ಅಪ್ಪಣ್ಣ ಗುಡದರಿ, ವಿರುಪಾಕ್ಷಿ ಶಿವಲಿಂಗಯ್ಯಾ ಹುಕ್ಕೇರಿಮಠ, ರಮೇಶ ಹೊಂಗಲ, ಭೀಮಶಿ ಚಾವಡಿ, ಬಸವರಾಜ ಕರದೇಸಾಯಿ, ರಾಜು ಬಸವೆಣ್ಣೆಪ್ಪಾ ತಳವಾರ ಬೂದಿಹಾಳ ಗ್ರಾಮದ ರಾಜಶೇಖರ ಬಸ್ಸಪ್ಪ ಗೂಳಿ, ಯದ್ದಲಗುಡ್ಡ, ಗ್ರಾಮದ ಈರನಗೌಡ ಚಂದ್ರಪ್ಪ ಪಾಟೀಲ ಜೂಜಾಟ ಆಡುತ್ತಿದ್ದ ನೇಜ ಗ್ರಾಮದ ದತ್ತಾ ಯಶವಂತ ಖುರಾಡೆ, ಸಚೀನ ರಾಜು ನಾಯಿಕ ಮತ್ತು ಅಪ್ಪಾಸಾಬ ಗಣಪತಿ ನಾಯಿಕ ಬಂಧಿತರು. ಇತರಿಂದ 5705 ರೂ. 10 ಮೊಬೈಲ್ ಮತ್ತು ಏಳು ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಅಂಕಲಿ ಮತ್ತು ಸದಲಗಾ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...