ಮಳೆ-ಬೆಳೆ ಸಮೃದ್ದಿಗಾಗಿ ಮಹಿಳೆಯರಿಂದ ವಿಶೇಷ ಪೂಜೆ

0
24
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಶ್ರಾವಣ ಮಾಸದ ನಿಮಿತ್ಯ ಹಾಗೂ ಮಳೆ-ಬೆಳೆ ಸಮೃದ್ದಿಗಾಗಿ ಮಹಿಳೆಯರು ಬನ್ನಿ ಮಹಾಂಕಾಳೆಗೆ ವಿಶೇಷ ಪೂಜೆ ನೆರವೇರಿಸಿದರು.
ಇತ್ತೀಚೆಗೆ ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಮೇಘರಾಜನು ಸತತವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಕೈಕೊಟ್ಟಿದ್ದರಿಂದ ಕಂಗಾಲಾದ ಮಹಿಳೆಯರು ಬಹಳಷ್ಟು ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ ಧಾರ್ಮಿಕ ಪರಂಪರೆ ಹಿನ್ನಲೆಯುಳ್ಳ ಬನ್ನಿಮಾತೆಗೆ ವಿಶೇಷವಾದ ಪೂಜೆ ಮಾಡುವುದರ ಮೂಲಕ ತಮ್ಮೆಲ್ಲಾ ಆಶೆ-ಆಕಾಂಕ್ಷೆಗಳಿಗೆ ಹರಸಿ ರೈತರಿಗೆ ಬಂದಿರುವ ಕಷ್ಟ ಕಾಲವನ್ನು ದೂರಮಾಡಬೇಕೆಂದು ಬನ್ನಿ ಮಹಾತಾಯಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಮಲವ್ವ ಜಕ್ಕಲಿ, ಸುನಂದವ್ವ ಪಾಟೀಲ, ಶಕುಂತಲಾ ದುಂಡಿ, ಲಲಿತಾ ಜಕ್ಕಲಿ, ರೇಖಾ ಜಕ್ಕಲಿ, ಯಲ್ಲವ್ವ ಪಾಟೀಲ, ನಿರ್ಮಲಾ ಜಕ್ಕಲಿ, ನೀಲವ್ವ ಜಕ್ಕಲಿ ಚನ್ನಬಸವ್ವ ಜಕ್ಕಲಿ ಲಕ್ಷ್ಮವ್ವ ರಾಹುತ, ಈರಮ್ಮ ಜಕ್ಕಲಿ, ಬಸಮ್ಮ ಮಠದ ಸೇರಿದಂತೆ ಇನ್ನು ಹಲವು ಮಹಿಳೆಯರು ಇದ್ದರು.

loading...