ಮುಖ್ಯಮಂತ್ರಿಗಳು ಧರ್ಮದ ಹೊರಾಟದಲ್ಲಿ ಜಾತಿಯನ್ನು ಒಡೆಯುತ್ತಿಲ್ಲ: ಸಚಿವ ವಿನಯ

0
36
loading...

ಚನ್ನಮ್ಮ ಕಿತ್ತೂರು ಃ ಲಿಂಗಾಯತ ಧರ್ಮದ ಹೋರಾಟ ರಾಜಕಾರಣಿಗಳಿಗೆ ಮುಳ್ಳಿನ ಹಾಸಿಗೆಯಾಗಿ ಪರಿಣಮಿಸಿದೆ, ಮುಖ್ಯಮಂತ್ರಿಗಳು ಧರ್ಮದ ಹೊರಾಟದಲ್ಲಿ ಜಾತಿಯನ್ನು ಒಡೆಯುತ್ತಾರೆಂದು ಕೆಲವರು ಆರೋಪಿಸುತ್ತಿದ್ದಾರೆ ಆದರೆ ಅದು ಶುದ್ಧ ಸುಳ್ಳು ಎಂದು ಧಾರವಾಢ ಜಿಲ್ಲಾ ಉಸ್ತವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ನಡೆದ ಲಿಂಗಾಯತ ಒಂದು ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಹಕ್ಕು ಒತ್ತಾಯ ಕುರಿತು ಚಲೋ ಬೆಳಗಾವಿ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತರೆಲ್ಲರೂ ಒಟ್ಟುಗೂಡಿ ಅವರಿಗೆ ಸ್ವತಂತ್ರ್ಯ ಧರ್ಮವಾಗಿಸುವಂತೆ ಶಿಪಾರಸ್ಸು ಮಾಡಲು ಮನವಿ ಮಾಡಿದ್ದೇವು, ಅದರ ಪ್ರಕಾರ ಅವರು ಮುಂದುವರೆದಿದ್ದಾರೆ ಹೊರತು ಯಾವುದೇ ಜಾತಿ ಒಡೆಯುವ ಹುನ್ನಾರವನ್ನು ಅವರು ಮಾಡುತ್ತಿಲ್ಲವೆಂದು ಸ್ಪಷ್ಟ ಪಡಿಸಿದರು.
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸರ್ವಕಾಲಿಕ ಸಾರುವ ಅತ್ಯಂತ ವೈಜ್ಷಾನಿಕ ವೈಚಾರಿಕ ವಿಶ್ವ ಶ್ರೇಷ್ಠ ಲಿಂಗಾಯತ ಧರ್ಮವಾಗಿದೆ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಮಾನವ ಹಕ್ಕುಗಳಿಗಾಗಿ ನಡೆಸಿದ ಅಪೂರ್ವ ಆಂದೋಲನವಾಗಿದೆ. ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ, ಕಸುಬುಗಳಿವೆ ಅದರೆ ವೃತ್ತಿಗೌರವ ಸಮಾನತೆಯನ್ನು ಶರಣರ ಸಂದೇಶಗಳಲ್ಲಿ ಕಾಣುತ್ತೇವೆ. ಲಿಂಗಾಯತ ಸ್ವತಂತ್ರ ಧರ್ಮ, ಅದು ಹಿಂದೂ ಧರ್ಮದ ಭಾಗವಲ್ಲ, ಮಾನ್ಯತೆಗಾಗಿ ಈಗ ನಡೆದಿರುವ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲವೆಂದ ಅವರು, ಈ ದೇಶದಲ್ಲಿರುವ ಅನೇಕ ಧರ್ಮಗಳಂತೆ ನಮ್ಮದೂ ಸ್ವತಂತ್ರ ಧರ್ಮ ಅದು ವೈಚಾರಿಕ ನೆಲಗಟ್ಟಿನ ಮೇಲೆ ಬೆಳೆದು ಬಂದಿದೆ. ಸಾಂವಿಧಾನಿಕ ಮಾನ್ಯತೆಗಾಗಿ ಈ ಹೋರಾಟ ಎಂದು ಹೇಳಿದರು.
ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಜಂಗಮರ ವಿರೋಧಿ ಧರ್ಮವಲ್ಲ ಲಿಂಗಾಯತ ಜಂಗಮರ ಪರವಾದ ಧರ್ಮವಾಗಿದೆ ಅದನ್ನು ಸ್ವೀಕರಿಸಲು ಏಕೆ ಹಿಂಜರಿಕೆ. ಸಂಘಟನೆಗೆ ಮರುನಾಮಕರಣದ ಕುರಿತು ಧಾವಣಗೆರಿಯಲ್ಲಿ 1941ರಲ್ಲಿ ನಡೆದ ಮಹಾಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಅದು ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಇನ್ನೆಷ್ಟು ಕಾಯುವದು ಸರಿಯಲ್ಲ. ಈಗಕಾಲ ಪಕ್ವವಾಗಿದ್ದು, ಹೆಸರು ಬದಲಾವಣೆ ಆಗಲೇಬೇಕು. ಹಾನಗಲ್ ಕುಮಾರ ಸ್ವಾಮೀಗಳ ಶೈಕ್ಷಣಿಕ ಕ್ರಾಂತಿ ಮಾಡಿದರು ಅವರ ಹೆಸರು ಅಜರಾಮರವಾಗಿ ಉಳಿಯಬೇಕಾದರೆ ಮೊದಲು ಹೆಸರನ್ನು ಲಿಂಗಾಯತ ಮಹಾಸಭೆ ಎಂದು ಪರಿವರ್ತಿಸಿಸಬೇಕು, ನಾವು ಯಾವುದೋ ಹೊಸ ಸಂಸ್ಥೆಯನ್ನು ಹುಟ್ಟುಹಾಕುವದಿಲ್ಲ ಇರುವ ಸಂಸ್ಥೆಯಲ್ಲೇ ಬದಲಾವಣೆ ತರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಾನ್ಯತೆಗಾಗಿ ಹೋರಾಟ ಅನಿವಾರ್ಯವಾಗಿದ್ದು ಲಕ್ಷಾಂತರ ಶರಣರು ಈ ರ್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಾಹಿತಿ ಡಾ.ರಂಜಾನ ದರ್ಗಾ ಮಾತನಾಡಿ, ಮೀಸಲಾತಿ ಧರ್ಮಕ್ಕಲ್ಲ, ಜಾತಿಗೆ ಸಂಬಂಧಿಸಿದೆ, ಹೀಗಾಗಿ ಲಿಂಗಾಯತ ಧರ್ಮದ ಮಾನ್ಯತೆ ನೀಡಿದರೆ ಹಾನಿ ಇಲ್ಲ. ಲಾಭವೇ ಆಗಲಿದೆ, ವರ್ಣಾಶ್ರಮ ಇಲ್ಲದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಶಿಕ್ ಬೌದ್ಧ ಸೇರಿದಂತೆ ಆರೂ ಧರ್ಮಗಳಿಗೆ ಪ್ರತ್ಯೇಕ ಮಾನ್ಯತೆ ಲಭಿಸಿರುವಾಗ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಏಕೆ ಲಭ್ಯಸುವದಿಲ್ಲ.
ಈ ನಿಟ್ಟಿನಲ್ಲಿ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ನೇಗಿನಾಳದ ಬಸವ ಸಿದ್ದಲಿಂಗ ಸ್ವಾಮೀಜಿ, ಶಂಕರ ಗುಡಸ ಇದ್ದರು. ಚಿಕ್ಕನಂದಿಹಳ್ಳಿ ಚಂದ್ರಗೌಡ ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಅಶೋಕ ಅಳ್ನಾವರ ವಂದಿಸಿದರು.

loading...