ರಾಜ್ಯ ಸರಕಾರದ ಪ್ರಕರಣ ಖಂಡಿಸಿ ಮನವಿ

0
38
loading...

ಕನ್ನಡಮ್ಮ ಸುದ್ದಿ-ಕುಮಟಾ: ರಾಜ್ಯ ಸರ್ಕಾರ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಗುರುವಾರ ಉಪವಿಭಾಗಾಧಿಕಾರಿ ರಮೇಶ ಕಳಸದ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಕಿರುಕುಳ ನೀಡುತ್ತಿದೆ. ಮುಧೋಳದಲ್ಲಿ ಹಿಂದು ಮುಖಂಡರನ್ನು ಬಂಧಿಸಿ, ನಾಲ್ಕೈದು ತಿಂಗಳು ಜೈಲು ಸೇರುವಂತೆ ಮಾಡಿದೆ. ಕೆಲ ಅಮಾಯಕ ಮುಖಂಡರನ್ನು 3 ತಿಂಗಳು ಗಡಿಪಾರು ಮಾಡಿದೆ. ಈಗ ಇನ್ನು ಕೆಲವಷ್ಟು ಮುಖಂಡರನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಿರುವುದು ಖಂಡನೀಯ.
ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೂ ಸಾಕಷ್ಟು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಹಿಂದುಗಳ ಮೇಲಾಗುತ್ತಿರುವ ಇಂಥ ದೌರ್ಜನ್ಯ ಮತ್ತು ಅನ್ಯಾಯವನ್ನು ಹಿಂದು ಜಾಗರಣಾ ವೇದಿಕೆ ಸಹಿಸುವುದಿಲ್ಲ. ರಾಜ್ಯ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದು ಕಾರ್ಯಕರ್ತರ ವಿರುದ್ಧ ಅನುಸರಿಸಿರುವ ಧಮನಕಾರಿ ನೀತಿಯನ್ನು ವಿರೋಧಿಸುತ್ತೇವೆ. ಹಿಂದು ಹಬ್ಬಗಳು ಬಂದಾಗ ಗಡಿಪಾರು ಮಾಡುವ ಮೂಲಕ ಜಿಲ್ಲಾಡಳಿತ ನಮ್ಮ ಕಾರ್ಯಕರ್ತರ ಸಾಮಾಜಿಕ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಮುಧೋಳ ತಾಲೂಕಿನಲ್ಲಿ ಹಿಂದು ಮುಖಂಡರ ಮೇಲೆ ಮಾಡಿರುವ ಗಡಿಪಾರು ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ನೀಡಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಭಾಸ್ಕರ ನಾಯ್ಕ, ತಾಲೂಕು ಸಂಚಾಲಕ ರಾಮ ನಾಯ್ಕ, ಜಿಪಂ ಸದಸ್ಯೆ ಗಾಯತ್ರಿ ಗೌಡ, ಪ್ರಮುಖರಾದ ದತ್ತಾತ್ರಯ ನಾಯ್ಕ, ವಿಶ್ವನಾಥ ನಾಯ್ಕ, ಸುಬ್ರಹ್ಮಣ್ಯ ಉಡದಂಗಿ, ಲಕ್ಷ್ಮಣ ಅಂಬಿಗ, ಸುಕುಮಾರ ನಾಯ್ಕ, ವೆಂಕಟೇಶ ಪ್ರಭು, ನಿತೀನ್ ಗುನಗಾ, ಅಣ್ಣಪ್ಪ ಹರಿಕಂತ್ರ, ಅನೀಶ ಪಂಡಿತ್ ಗಜು ನಾಯ್ಕ, ಕಿರಣ ಪಟಗಾರ ಹಾಗೂ ಮೊದಲಾದವರು ಪಾಲ್ಗೊಂಡಿದ್ದರು.

loading...