ರಾಷ್ಟ್ರೀಯತೆ, ಭಾವೈಕ್ಯತೆಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ: ವಿಠ್ಠಲ

0
60
loading...

ಗೋಕಾಕ: ರಾಷ್ಟ್ರೀಯ ಹಬ್ಬಗಳ ಮಹತ್ವ ಮತ್ತು ಔಚಿತ್ಯತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿ ಅವರಲ್ಲಿ ರಾಷ್ಟ್ರೀಯತೆ ಹಾಗೂ ಭಾವೈಕ್ಯತೆಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಿವೃತ್ತ ಹಿರಿಯ ಶಿಕ್ಷಕರಾದ ವಿಠ್ಠಲ ಹಟ್ಟಿ ಹೇಳಿದರು.
ಸೋಮವಾರದಂದು ಇಲ್ಲಿಯ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಶಂಕರಲಿಂಗ ಬಾಲ ವಿಕಾಸ ಮಂದಿರದ ಪುಟಾಣಿಗಳಿಂದ ರಕ್ಷೆಯನ್ನು ಕಟ್ಟಿಸಿಕೊಂಡ ನಂತರ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ ರಕ್ಷಾಬಂಧನದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಸಾಂಸ್ಕøತಿಕ ಸಮಿತಿಯ ಮುಖ್ಯಸ್ಥ ರಾಮಚಂದ್ರ ಕಾಕಡೆ, ಗುರುಮಾತೆಯರಾದ ಜಿ.ಕೆ.ಪಾಟೀಲ, ಎಸ್.ಸಿ.ಕುಪ್ಪಸಗೌಡರ, ಅನಿತಾ ಹೋಳಿಮಠ ಉಪಸ್ಥಿತರಿದ್ದರು.

loading...