ರೈಲು ಚಾಲಕನ ಚಾಣಾಕ್ಷತನದಿಂದ ಬದುಕುಳಿದ ವೃದ್ಧ

0
148
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:2 ಚಲಿಸುತ್ತಿದ್ದ ರೈಲು ನಿಲ್ಲಿಸುವ ಮೂಲಕ ರೈಲ್ವೆ ಚಾಲಕ ವೃದ್ಧನ ಪ್ರಾಣ ಉಳಿಸಿದ ಘಟನೆ ನಗರ ಬಾಂದೂರಗಲ್ಲಿ ಸಮೀಪದ ನಡೆದಿದೆ.
ವೃದ್ದನೊಬ್ಬ ರೈಲ್ವೆ ಹಳಿ ಮೇಲೆ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ. ರೈಲು ಇನ್ನೇನು ಹತ್ತಿರ ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ್ದಾನೆ.
ಮಂಗಳವಾರ ಸಂಜೆ 4.15 ಕ್ಕೆ ಹರಿಪ್ರಿಯಾ ಎಕ್ಸ್‍ಪ್ರೆಸ್ ರೈಲು ಬಂದಿದೆ. ಆ ಹೊತ್ತಿನಲ್ಲಿಯೇ ವಡಗಾವಿ ನಿವಾಸಿ 65ರಿಂದ 70 ವರ್ಷದ ವೃದ್ಧ ನೋಡ ನೋಡುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಗೆ ಬಂದಿದ್ದಾನೆ. ರೈಲು ಹಳಿ ಮೇಲೆ ಕಾಲು ಹೊರ ಭಾಗಕ್ಕೆ ಚಾಚಿ ದೇಹ ಅರ್ಧ ಭಾಗವನ್ನು ಹಳಿ ಒಳಗೆ ಹಾಕಿ ಮಲಗಿಕೊಂಡಿದ್ದಾನೆ. ಬೆಳಗಾವಿ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತದೆ. ಇದಕ್ಕಾಗಿ ಚಾಲಕ ನಿಧಾನವಾಗಿ ರೈಲು ಚಾಲನೆ ಮಾಡುತ್ತಿದ್ದ. ಇದರಿಂದ ರೈಲು ನಿಲ್ಲಸಲು ಸಾಧ್ಯವಾಗಿ ವೃದ್ಧನ ಪ್ರಾಣ ಉಳಿದಿದೆ.
ರೈಲು ನಿಲ್ಲಿಸಿದ್ದನ್ನು ಗಮನಿಸುತ್ತಿದ್ದ ಸ್ಥಳೀಯರು ತಮ್ಮ ಮನೆಯಿಂದ ಹೊರ ಬರಲಾರದೇ ಅಸಹಾಯಕರಾಗಿ ನಿಂತಿದ್ದರು. ಹಳಿ ಪಕ್ಕದಲ್ಲಿ ಕಬ್ಬಿಣದ ಸಲಾಕೆ ಮೂಲಕ ಆವರಣ ಹಾಕಿದ್ದರಿಂದ ಜನ ಯಾರೂ ವೃದ್ಧನ ನೆರವಿಗೆ ಬರಲು ಆಗಲಿಲ್ಲ. ಹಳಿಯ ಬಳಿ ಇದ್ದ ಕೆಲವರು ಘಟನೆ ನಂತರ ಧಾವಿಸಿ ವೃದ್ದನಿಗೆ ಬುದ್ದಿವಾದ ಹೇಳಿದ್ದಾರೆ.
ರೈಲ್ವೆ ಹಳಿ ಬಳಿ ಯುವಕನೊಬ್ಬ ಹೋಳಿ ಕಾಮಣ್ಣ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಮೊಬÉೈಲ್‍ನಲ್ಲಿ ಮಾತನಾಡುತ್ತಿದ್ದ. ರೈಲು ನಿಂತಿದ್ದನ್ನು ಗಮನಿಸಿದ ಯುವಕ ಗಾಬರಿಗೊಂಡು ನೋಡಿದಾಗಲೇ ರೈಲು ಚಾಲಕ ಇಳಿದು ವೃದ್ಧನ ಬಳಿ ಬಂದು ಯುವಕನ ಸಹಾಯದಿಂದ ಹಳಿಯಿಂದ ಪಕ್ಕಕ್ಕೆ ಎತ್ತಿಟ್ಟಿರುವುದು ಗಮನಕ್ಕೆ ಬಂದಿರುವುದಾಗಿ ಪ್ರತಿಕ್ರಿಯಿಸಿದ್ದಾನೆ.
ಮಧ್ಯಾಹ್ನ 4:15ರ ಸುಮಾರಿಗೆ ಬಂದ ಹರಿಪ್ರಿಯಾ ಎಕ್ಸ್‍ಪ್ರೆಸ್ ರೈಲು ನಮ್ಮ ಮನೆ ಬಳಿ ನಿಂತಿದೆ. ರೈಲು ಹಳಿ ಬಳಿ ನೋಡಿದಾಗ ವೃದ್ಧನೋರ್ವ ಮಲಗಿಕೊಂಡಿರುವುದು ಗಮನಕ್ಕೆ ಬಂದಿದೆ. ನಡೆಯಲು ಬಾರದೇ ಅಲ್ಲಿಯೇ ಮಲಗಿಕೊಂಡಿದ್ದ ವೃದ್ಧನನ್ನು ರಕ್ಷಿಸಿ ಹೊರಗಡೆ ಎತ್ತಿ ತರಲು ನಾನೂ ಕೈ ಜೋಡಿಸಿದೆ ಎಂದು ಯುವಕ ಹೇಳಿದ. ಅದೇ ಸಮಯಕ್ಕೆ ಬಂದ ನನ್ನ ಇನ್ನೊಬ್ಬ ಸ್ನೇಹಿತ ವೃದ್ದನನ್ನು ಆತನ ಮನೆಗೆ ತಲುಪಿಸಿದ್ದಾನೆ ಎಂದು ಆತ ಘಟನೆಯನ್ನು ನೆನಪಿಸಿಕೊಂಡ.
ಕೌಟುಂಬಿಕ ಕಲಹದಿಂದ ಬೇಸತ್ತಿರುವ ವೃದ್ಧನಿಗೆ ಪುತ್ರ, ಪುತ್ರಿಯಿದ್ದಾರೆ. ಮನೆಯಲ್ಲಿ ಯಾರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಬೇಸತ್ತು ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಎಂದು ಆತ ತಿಳಿಸಿದ್ದಾಗಿ ಯುವಕ ಹೇಳಿದ್ದಾನೆ.

 

loading...