ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಅಧ್ಯಯನ ಮಾಡಿ

0
35
loading...

ರಾಮದುರ್ಗ: ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಅಧ್ಯಯನ ಮಾಡುತ್ತಾ, ಪಠ್ಯೆ ಜೋತೆಗೆ ಪಠೇತರ ಚಟುವಟಿಕೆ ಭಾಗವಹಿಸಿ ಉನ್ನತವಾದ ಸಾಧನೆಯನ ಶಿಖರವನ್ನು ಹೊಂದಬೇಕು. ಶಾಲೆ ಹಾಗೂ ನಿಮ್ಮ ತಂದೆ ತಾಯಿಯರ ಕೀರ್ತಿ ತರಬೇಕು ಎಂದು ಬನಹಟ್ಟಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ.ಮಟೋಳ್ಳಿ ತಿಳಿಸಿದರು.
ಸ್ಥಳೀಯ ಸಿ.ಎಸ್.ಬಿ ಕಲಾ ಶಾ ಎಂ. ಆರ್.ಪಿ. ವಿಜ್ಞಾನ ಹಾಗೂ ಜಿ.ಎಲ್ ರಾಠಿ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕ್ರೀಡಾ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೌಂದರ್ಯ ಪ್ರಜ್ಞೆ ಇದ್ದರೆ ಮಾತ್ರ ವಸ್ತುವಿನಗೊಳಗಿನ ಸೌಂದರ್ಯ ಕಾಣಿಸುತ್ತದೆ. ಸತತಾಭ್ಯಾಸ, ಕ್ರಿಯಾಶೀಲತೆ ಮತ್ತು ಆಸಕ್ತಿಗಳಿಲ್ಲದಿದ್ದರೆ ವಿದ್ಯೆಯೊಳಗಿನ ಗಂಧ ತಿಳಿಯದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಪಿ.ಎಂ.ಜಗತಾಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾ ಪ್ರಸಾರಕ ಸಮಿತಿಯ ಸದಸ್ಯರುಗಳಾದ ಡಾ. ವೈ.ಬಿ.ಕುಲಗೋಡ, ಪಿ.ಎಲ್.ದೊಡಮನಿ, ಟಿ.ದಾಮೋದರ, ಎಸ್.ಎಮ್.ಮಾಳಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಎಸ್.ಎಸ್.ಕೊಡತೆ ಸ್ವಾಗತಿಸಿದರು. ಜಿಮಖಾನಾ ಉಪಾಧ್ಯಕ್ಷ ಪ್ರೊ| ಎಸ್.ವಿ.ಕುಲಕರ್ಣಿ ವರ್ಗ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಡಾ. ಎಚ್.ಪಿ.ಹಾಲೊಳ್ಳಿ ಪರಿಚಯಿಸಿದರು. ಶೃತಿ ಭಜಂತ್ರಿ ನಿರೂಪಿಸಿದರು. ಸುಮಾ ಆರಿಬೆಂಚಿ ವಂದಿಸಿದರು.

loading...