ವಿದ್ಯುತ್ ಅವಘಡದಿಂದ ಭಸ್ಮ, ಅಪಾರ ಪ್ರಮಾಣದಲ್ಲಿ ನಷ್ಟ

0
25
loading...

ಕುಷ್ಟಗಿ: ಪಟ್ಟಣದ ವಾರ್ಡ 10 ರಲ್ಲಿ ಶರಣಪ್ಪ ಹೂಗಾರ ಎಂಬುವರ ಮನೆಯಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಆಸ್ತಿ ಪಾಸ್ತಿಯ ಕಾಗದಪತ್ರಗಳು ಭಸ್ಮವಾಗಿದ್ದು ಸುಮಾರು 5 ರಿಂದ 6 ಲಕ್ಷದ ವರಗೆ ನಷ್ಟ ಉಂಟಾದ ಘಟನೆ ನಡೆದಿದೆ.
ಅದೇ ಸಮಯಕ್ಕೆ ವಿದ್ಯುತ್ ಇಲಾಖೆಯ ಲೈನಮನ್‍ಗಳು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಮನೆಯ ಮೇನ್ ಲೈನ್‍ಗಳನ್ನು ಕಟ್ ಮಾಡಿದರು. ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮನೆಯವರು ತಮ್ಮ ಮಕ್ಕಳಿಗೆ ಜ್ವರದಿಂದ ಬಳುಲುತ್ತಿದ್ದರಿಂದ ಇಲಕಲ್ ಆಸ್ಪತ್ರೆಗೆ ಹೋಗಲಾದ ಕಾರಣ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿದ್ಯುತ್ ತಗಲಿ ಮನೆಗೆ ಬೆಂಕಿ ತಗುಲಿದೆ. ಆದರೆ ಮನೆಯಲ್ಲಿನ ಸಿಲಿಂಡರಗಳು ಬ್ಲಾಸ್ಟ ಆಗುವ ಸಂಭವವಿತ್ತು. ಸುತ್ತ ಮುತ್ತಲಿನ ಮನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿದರು.

loading...