ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ

0
21
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ವಿವಿಧ ಬೇಡಿಕೆ ಈಡೇರಿಸುವ ಕುರಿತು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯೂ ತುಂಗಭದ್ರ ನಗರದಿಂದ ಕೊಪ್ಪಳ ಸರ್ಕಲ್‍ಗೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಕಚೇರಿ ಮುಂದಿರುವ ರಾಜ್ಯ ಹೆದ್ದಾರಿಯನ್ನು ಕೆಲ ಸಮಯ ಬಂದ್ ಮಾಡಿದರು.
ಈ ವೇಳೆ ಕರವೇ ತಾಲೂಕು ಅಧ್ಯಕ್ಷ ದುರ್ಗಪ್ಪ ಮೋರನಾಳ ಮಾತನಾಡಿ, ಬರಗಾಲ ಛಾಯೆಗೆ ರಾಜ್ಯದ ಜನರು ತತ್ತರಿಸಿದ್ದು, ರೈತರು ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಎಲ್ಲ ಗ್ರಾಮಗಳಗ ರೈತರ ಜಮೀನುಗಳಿಗೆ ನೀರು ಹರಿಸುವಂತಾಗಬೇಕು ಎಂದು ಒತ್ತಾಯಿಸಿದರು.
ನಮ್ಮ ರಾಜ್ಯದ ಕನ್ನಡಧ್ವಜವನ್ನು ಯಾವುದಕ್ಕೂ ಬದಲಾವಣೆ ಮಾಡಬಾರದು, ಹಳ್ಳಿಕೇರಿ ರೇಲ್ವೆ ಸ್ಟೇಷನ ಪುನರ್ ದುರಸ್ಥಿ ಕಾರ್ಯ ಕೈಗೊಳ್ಳಬೇಕು. ಮುಂಡರಗಿ ಪಟ್ಟಣದ ತುಂಗಭದ್ರ ನಗರದಲ್ಲಿ ರಸ್ತೆ, ಚರಂಡಿ ದುರಸ್ಥಿಗೊಳಿಸುವುದರ ಜೊತೆಗೆ ಬೀದಿದೀಪ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಮನವಿ ಸ್ವೀಕರಿಸಿದರು.
ಬಸವರಾಜ ಪುರದ, ಹೊನ್ನಪ್ಪ ಚೆನ್ನಳ್ಳಿ, ಪ್ರಕಾಶ ಸತ್ಯಣ್ಣವರ, ಶಂಕರಯ್ಯ ಹಿರೇಮಠ, ಚಿದಾನಂದಯ್ಯ ಹಿರೇಮಠ, ಕಸ್ತೂರೆವ್ವ ಅರಕೇರಿ, ಮಲ್ಲವ್ವ ಆಲೂರ, ಶಾಂತಯ್ಯ ಹಿರೇಮಠ, ಗವಿಸಿದ್ದಯ್ಯ ಆಲೂರ, ಬಸವರಾಜ ಅಬ್ಬಿಗೇರಿ, ಹುಚ್ಚಪ್ಪ ಕೊಪ್ಪಳ, ಹಾಲಪ್ಪ ಜಾಕಲಾತಿ, ಚನ್ನಬಸವರೆಡ್ಡಿ ಚೌರಟಿ, ಅದಂಪ್ಪ ಚೆನ್ನಳ್ಳಿ, ಸೇರಿದಂತೆ ಇತರರು ಇದ್ದರು.

 

loading...