ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಮಾರ್ಗವಾಗಿದೆ : ವಿಜಯಾನಂದ

0
32
loading...

ಹುಗನುಂದ: ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮಾರ್ಗವಾಗಿದೆ. ಶಿಕ್ಷಣ ಎಂದರೆ ಓದುವ ಹಾಗೂ ಬರೆಯುವದಲ್ಲ ಇದರಿಂದ ಜ್ಞಾನ ಸಂಪಾದನೆ ಮೂಲಕ ಇಂದು ಸ್ಪರ್ದಾತ್ಮಕವಾಗಿ ಎಲ್ಲ ರಂಗಗಳಲ್ಲಿ ಮುಂದುವರಿದು ಬಾವಿ ಜೀವನವನ್ನು ಕಂಡುಕೊಳ್ಳಲು ವಿಧ್ಯಾರ್ಥಿಗಳು ಪ್ರಯತ್ನವನ್ನು ಪಡಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ನಗರದ ಸರಕಾರಿ ಪ್ರಥಮದರ್ಜೇ ಕಾಲೇಜಿನ 2017-18ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚತಿವಟಿಕೆ ಘತಕಗಳನ್ನು ಸಸಿ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತ ಇಲ್ಲಿ ಉತ್ತಮವಾಗಿ ಭೋಧನ ಮಾಡುವ ಪ್ರಾಧ್ಯಪಕರು ಇದ್ದರಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಬೇರೆ ಜಿಲ್ಲೆಗಳಿಂದ ಅಧ್ಯಯನಕ್ಕಾಗಿ ಅತಿ ಹೇಚ್ಚು 900ಕ್ಕೂ ವಿಧ್ಯಾರ್ಥಿಗಳು ಬರುವ ಸಂಗತಿಯಿಂದ ಸಂತಸವಾಗಿದೆ. ತಮ್ಮ ಅಮೂಲ್ಯವಾದ ಸಮಯುವನ್ನು ವ್ಯರ್ಥ ಮಾಡದೆ ದುಷ್ಟ ಚಟಗಳಿಗೆ ಬಲಿಯಾಗದೆ ತಂದೆ ತಾಯಿಗಳ ಹಾಗೂ ಕಲಿಸಿದ ಗುರುಗಳ ಕಿರ್ತಿ ತರುವಂತಾಗಬೇಕು. ಕೇಂದ್ರ ನ್ಯಾಕ ಸಮಿತಿಯ ಭೇಟೆಯ ನಂತರ ರಾಜ್ಯ ಸರ್ಕಾರ ಕಾಲೇಜಿನ ಅಭಿವೃದ್ದಿಗಾಗಿ 1.5 ಕೋಟಿ ಅನುದಾನವನ್ನು ನೀಡಿದೆ.ಎಂದರು.ಹಿರೇವಂಕಲಕುಂಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರೋ.ಎಸ್.ವ್ಹಿ,ಡಾಣಿ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳು ತಮ್ಮಗಿರುವ ಸಮಯವನ್ನು ಯೋಜನಾ ಬದ್ದವಾಗಿ ಅಧ್ಯಯನಕ್ಕಾಗಿ ಮೀಸಲಿಟ್ಟು ಸತತ ಪ್ರಯತ್ನ ಮೂಲಕ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯ.ಪದವಿ ಮುಗಿದ ನಂತರ ಅಧ್ಯಯನ ಮಡುವ ಬದಲು ಈಗಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ವಿಷಯಗಳ ಆಯ್ಕೆ ಮತ್ತು ಪೂರ್ವಸಿದ್ದತೆಯನ್ನು ಮಾಡಿಕೊಳ್ಳಬೇಕೆಂದರು.ಅಧ್ಯಕ್ಷತೆಯನ್ನು ಪ್ರಾಚಾರ್ಯ ಶಿವಾನಂದ ಜಮಾದಾರ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಗಂಗಮ್ಮ ವೀರಾಪೂರ,ಸಿಡಿಸಿ ಸದಸ್ಯರಾದ ಮಹಾಂತೇಶ ಅವಾರಿ,ಬಿ.ವಿ ಪಾಟೀಲ,ಎಸ್.ಆರ್.ಕಡಿವಾಲ.ಎಸ್.ಜಿ.ಪರೂತಿ,ಗದ್ದೆಪ್ಪ ಬಂಡಿವಡ್ಡರ,ರಾಜ್ಯಶ್ರೀ ವಸ್ತ್ರದ ವೇದಿಕೆಯಲ್ಲಿದ್ದರು.ಕು-ವಿಧ್ಯಾ ಗೌಡರ ಪ್ರಾರ್ಥಸಿ,ಪ್ರೋ.ಬಿ.ವಾಯ್ ಆಲೂರ ಸ್ವಾಗತಿಸಿ.ಪ್ರೋ.ಖಾಜವಾಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿ,ಪ್ರೋ.ಅಮರೇಶ ಗೌಡರ ನಿರೂಪಿಸಿ,ಡಾ.ಎಸ್.ಬಿ.ಜೇವೂರಶೆಟ್ಟಿ ವಂದಿಸಿದರು.

loading...