ಶೌಚಾಲಯ ಕಟ್ಟಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ

0
22
loading...

ಕೋಹಳ್ಳಿ : ಪ್ರತಿಯೊಂದು ಗ್ರಾ.ಪಂ ಮಟ್ಟದಲ್ಲಿರುವ ಆಶಾ ಕಾರ್ಯಕರ್ತೆಯರ ಪ್ರಯತ್ನದಿಂದ ಶೌಚಾಲಯ ಕಟ್ಟಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ರಕ್ಷಾ ಬಂಧನ ಆಚರಣೆಯನ್ನು ಶೌಚಾಲಯ ಕಟ್ಟಿದ ಫಲಾನುಭವಿಗಳಿಗೆ ರಕ್ಷಾ ಕಟ್ಟುವ ಮೂಲಕ ಚಾಲನೆಯನ್ನು ತಾಲೂಕಿನಾಧ್ಯಂತ ನೀಡಲಾಗುತ್ತಿದೆ. ಇದರಿಂದ ಸೋದರಿಯರು ಶೌಚಾಲಯವನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕೆಂದು ಶೌಚಾಲಯ ಜಾಗೃತಿ ನೋಡಲ್ ಅಧಿಕಾರಿ ಎಸ್ಪಿ ಅಭ್ಯಂಕರ ಹೇಳಿದರು.
ಸೋಮುವಾರ ಗ್ರಾಮದಲ್ಲಿ ಹಮ್ಮಿಕೊಂಡ ಶೌಚಾಲಯ ಕುರಿತು ಬೆಳಗಾವಿ ಜಿಪಂ ಆದೇಶದಂತೆ ಸಹೋದರಿಗೆ ರಕ್ಷಾ ಕಟ್ಟುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಯ್ಕೆಯಾದ ಚುನಾಯಿತ ಪ್ರತಿ ನಿಧಿಗಳು, ಪ್ರಮುಖ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶೌಚಾಲಯವಿಲ್ಲದವರು ಕಡ್ಡಾಯವಾಗಿ ಶೌಚಾಲಯವನ್ನು ಕಟ್ಟಿಕೊಳ್ಳಬೇಕು. ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಕಟ್ಟಿಸಿಕೊಂಡ ಫಲಾನುಭವಿಯನ್ನು ತಾಲೂಕಾಡಳಿತದಿಂದ ಅಭಿನಂದಿಸಲಾಗುವುದು ಎಂದು ಹೇಳಿದರು.
ರಕ್ಷಾ ಕಟ್ಟುವ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ತಾಪಂ ಸದಸ್ಯ ಸದಾಶಿವ ಹರಪಾಳೆ, ತುಕಾರಾಮ ದೇವಖಾತೆ, ಮಲಿಕಸಾಬ ಪಡಸಲಗಿ, ಅಪ್ಪಾಸಾಬ ನಾಗಣಿ, ಪಿಡಿಒ ಈರಪ್ಪ ತಮದಡ್ಡಿ ಅಂಗನವಾಡಿ ಕಾರ್ಯಕರ್ತೆ ಮಂಗಲ ಕನ್ನಾಳ, ಆಶಾ ಕಾರ್ಯಕರ್ತೆಯರಾದ ಈಶ್ವರಿ ಮುಧೋಳ, ರಾಜಶ್ರೀ ಸತ್ತಿ, ಲಕ್ಷ್ಮೀ ಝರೆ, ಅಪ್ಪಾಸಾಬ ಬಾಡಗಿ ಸೇರಿದಂತೆ ಅನೇಕರಿಗೆ ರಕ್ಷಾ ಕಟ್ಟಲಾಯಿತು.

loading...