ಶೌಚಾಲಯ ಕಟ್ಟಿಕೋಳ್ಳುವಂತೆ ಮಾನವ ಸರಪಳಿ

0
25
loading...

ಬಯಲುದಶೆ ಮುಕ್ತ ಸಮಾಜ ನಿರ್ಮಾಣವಾಗಲು ಪ್ರತಿಯೊಬ್ಬರು ಸಹಕಾರ ಅಗತ್ಯ
ಕುಷ್ಟಗಿ: ಭಾರತ ಸರಕಾರದ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಈಗಾಗಲೆ ಹಲವಾರು ಕುಟುಂಬಗಳು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಬಯಲುದಶೆ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೋಬ್ಬ ನಾಗರಿಕರು ಕೈಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷ ಸೈಂiÀiದ್ ಮೈನುದ್ಧಿನ್ ಮುಲ್ಲಾ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಕೃಷ್ಣಗಿರಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಪ್ರತಿಯೋಬ್ಬರು ಶೌಚಾಲ ಕಟ್ಟಿಕೋಳ್ಳುವಂತೆ ಮಾನವ ಸರಪಳಿ ನಿರ್ಮಿಸಿ ಒತ್ತಾಯಿಸಿದರು. ಮಕ್ಕಳಿಗೆ ಪ್ರತಿಜ್ಞಾ ವಿದಿ ಭೋದಿಸಿ ಮಾತನಾಡುತ್ತ. ಸೌಚ್ಛತೆ ಕಾಪಾಡುವದು ನಮ್ಮ ಆದ್ಯ ಕರ್ತವ್ಯ ನಮ್ಮ ಪುರಸಭೆಯಿಂದ ಮನೆ ಮನೆಗೆ ಡಸ್ಟ ಪಿನ್ ನೀಡಲಾಗುವದು. ಸರ್ವೇ ಪ್ರಾಕಾರ ನಗರದಲ್ಲಿ 5 ಸಾವಿರ ಡಸ್ಟ ಪಿನ್ ಬೇಕಾಗುತ್ತದೆ. ಆದರೆ ನಮ್ಮ ಪುರಸಭೆಗೆ 5250 ಡಸ್ಟ ಪಿನ್ ಬರುತ್ತಿದ್ದು ಮುಂದಿನ ತಿಂಗಳು ಚಾಲನೆ ನೀಡಲಾಗುವದು ನಾಗರಿಕರು ಇದರ ಉಪಯೋಗ ಪಡೆದು ಶುದ್ಧತೆ ಕಾಪಾಡಬೇಕು. ಇನ್ನು ನಗರದಲ್ಲಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತ್ಯಾಜ್ಯ ವಸ್ತುಗಳನ್ನು ರಸ್ತೆಗಳಿಗೆ ಬಿಸಾಡದೆ ಸಂಗ್ರಹಿಸಿ ಪುರಸಭೆ ವಾಹನಗಳಲ್ಲಿ ಹಾಕಬೇಕು. ಮನಗೋಂದು ಶೌಚಾಲಯ ನಿರ್ಮಾಣಕ್ಕೆ ಪುರಸಭೆ ಸಹಕಾರ ನಿಈಡುತ್ತದೆ ಪ್ರತಿಯೋಬ್ಬರು ಶೌಚಲಯ ನಿರ್ಮಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಚನ್ನಪ್ಪ ನಾಲಗಾರ, ಮಹೇಶ್ ಕೊಳೂರ, ಮುಖ್ಯ ಶಿಕ್ಷಕಿ ಜಯದೇವಿ, ಶಿಕ್ಷರಾದ ಜಯಪ್ಪ ಗದಗ್, ಸುಮೀತ್ರಾ ದಾಸರ್, ಯಮನಮ್ಮ ಭಜಂತ್ರಿ ಹಾಗೂ ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

loading...