ಶೌಚಾಲಯ ನಿರ್ಮಾಣಕ್ಕಾಗಿ ಸಲಹೆ

0
25
loading...

ಘಟಪ್ರಭಾ: ಸಹೋದರ-ಸಹೋದರಿಯರ ನಡುವಿನ ನಿರ್ಮಲ ಪ್ರೇಮದ ಸಂಕೇತವಾದ ರಾಖಿ ಕಟ್ಟುವ ಆಚರಣೆಯನ್ನು ಬಳಸಿಕೊಂಡು ಶೌಚಾಲಯ ಜಾಗೃತಿ ಕೈಗೊಳ್ಳಲು ಜಿಲ್ಲಾ ಪಂಚಾಯತ ಸಿಇಒ ರಾಮಚಂದ್ರನ್.ಆರ್ ಅವರ ಆದೇಶದ ಮೇರೆಗೆ ಸಮೀಪದ ಶಿಂದಿಕುರಬೇಟ ಗ್ರಾಮದ ಗ್ರಾಮ ಪಂಚಾಯತ ವತಿಯಿಂದ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಶೌಚಾಲಯ ಉಡುಗೊರೆ ನಿಮಿತ್ಯ ಸೋಮವಾರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನೂತನವಾಗಿ ಶೌಚಾಲಯ ನಿರ್ಮಾಣಕ್ಕಾಗಿ ಶ್ರಮಿಸಿದ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಪಿಡಿಓ ಸಾಯೀಶ್ವರಿ ಮೆಣಸಿನಕಾಯಿ ಅವರು ಪ್ರೀತಿಯ ದ್ಯೋತಕವಾಗಿ ರಕ್ಷಣೆ ಕೋರಿ ರಾಖಿ ಕಟ್ಟುವ ಸಹೋದರಿಗೆ ಸಹೋದರರು ಉಡುಗೊರೆ ಕೊಡುವುದು ಸಾಮಾನ್ಯ. ಹೀಗೆ ಕೊಡುವ ಉಡುಗೊರೆ ಶಾಶ್ವತವಾಗಿ ಸಹೋದರಿಯ ಮಾನ, ಪ್ರಾಣ ರಕ್ಷಣೆ ಮಾಡುವಂತಿರಬೇಕು. ಅದಕ್ಕಾಗಿ ಸ್ವಾಭಿಮಾನ ಮತ್ತು ರಕ್ಷಣೆಯ ಸಂಕೇತವಾಗಿ ಶೌಚಾಲಯ ಉಡುಗೊರೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ದಾವಲ ದಬಾಡಿ, ಉಪಾಧ್ಯಕ್ಷೆ ಬಸವ್ವ ಪೂಜೇರಿ, ಗ್ರಾ.ಪಂ ಸದಸ್ಯರು, ಗ್ರಾ.ಪಂ ಲೆಕ್ಕಾಧಿಕಾರಿ ವಿಠ್ಠಲ ಕುಳ್ಳೂರು, ಗುಮಾಸ್ತ ಆನಂದ ಗುಡಕೇತ್ರ, ಮೋಹನ ಭೋಶ್ಯಾಗೋಳ, ಜ್ಯೋತಿ ಬಡ್ಡಿ, ಶಿವಪ್ಪ ಶಿರಹಟ್ಟಿ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

loading...