ಸಂತೋಷ ಮುರಡಿ ಅವರಿಗೆ ಸನ್ಮಾನ

0
20
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಕಳೆದ ಐದು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಮುಂಡರಗಿ ತಾಲೂಕು ವರದಿಗಾರ ಸಂತೋಷ ಮುರಡಿ ಅವರನ್ನು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.
ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ, ಸಿಂಗಟಾಲೂರ ಏತ ನೀರಾವರಿ, ತಾಲೂಕಿನ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಂತೋಷ ಮುರಡಿ ಪ್ರಕಟಿಸಿದ ವರದಿಗಳು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿತ್ತು. ಅವರ ಲೇಖನದ ಅದೇಷ್ಟೋ ವರದಿಗಳು ಪರಿಣಾಮಕಾರಿ ಸುದ್ದಿಯಾಗಿದ್ದವು. ಅನೇಕ ಸಮಸ್ಯೆಗಳು ಆಕ್ಷಣದಲ್ಲಿ ಬಗೆಹರಿಯುವಂತ ವಿಶೇಷ ಲೇಖನ ಪ್ರಕಟಿಸಿದ್ದು ಸಂತೋಷ ಅವರ ಪ್ರತಿಭೆಯ ಕೈಗನ್ನಡಿ.
ಇನ್ನು ಅವರು ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರನ್ನು ಗುರುತಿಸಿ ಅವರ ಕುರಿತು ವಿಶೇಷ ವರದಿ ಪ್ರಕಟಿಸುವ ಮೂಲಕ ಅವರನ್ನು ರಾಜ್ಯ ವ್ಯಾಪ್ತಿಯಲ್ಲಿ ಪ್ರಚಾರಿಸಿದ ಕೀರ್ತಿಯು ಸಂತೋಷ ಅವರಿಗೆ ಸಲ್ಲುತ್ತದೆ.
ತಾಲೂಕು ವರದಿಗಾರರಾದ ಸಂತೋಷ ಈಗಾಗಲೆ ಕೃಷಿಯಲ್ಲಿ ಸಾಧನೆ ಹೆಜ್ಜಿ ಹಾಕುತ್ತಿರುವ ಯುವಕ. ಇನ್ನು ಈ ಭಾಗದ ಅನೇಕ ವಿಷಯ ಕುರಿತು ವರದಿಯನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಹತ್ತು-ಹಲವಾರು ಉತ್ತಮ ಅಂಶಗಳನ್ನು ಒಳಗೊಂಡಂತ ಸಂತೋಷ ಮುರಡಿ ಅವರನ್ನು ಗುರುಸಿದ ತಾಲೂಕು ಆಡಳಿತವು ಸ್ವಾತಂತ್ರ್ಯೋತ್ಸವದಲ್ಲಿ ಸನ್ಮಾನಿಸಿ ಗೌರವಿಸಿದೆ.

loading...