ಸಮಸ್ಯೆ ಪರಿಹಾರಕ್ಕೆ ಪಿಗ್ಮಿ ಸಂಗ್ರಹಕಾರರು ಒತ್ತಾಯ

0
21
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಪಿಗ್ಮಿ ಸಂಗ್ರಹಕಾರರಾಗಿ ನಗರದ ವಿವಿಧ ಸಹಕಾರಿ ಸಂಘ ಮತ್ತು ಬ್ಯಾಂಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಗ್ಮಿ ಸಂಗ್ರಹಕಾರರು ವಿವಿಧ ಸಮಸ್ಯೆಗಳನ್ನು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಪರಿಹರಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಜಿಲ್ಲೆಗೆ ಬೇಟಿ ನೀಡಿದ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರಗೆ ಮನವಿ ಸಲ್ಲಿಸಿದರು.
ದೇಶದ ಹಾಗೂ ರಾಜ್ಯದಲ್ಲಿ ಸುಮಾರು 15 ಲಕ್ಷ ಪಿಗ್ಮಿ ಸಂಗ್ರಕಾರಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 10 ಸಾವಿರ ಹಾಗೂ ಬೆಳಗಾವಿ ನಗರದಲ್ಲಿಯೇ ಸುಮಾರು 5 ಸಾವಿರ ಪಿಗ್ಮಿ ಸಂಗ್ರಹಕಾರರಿದ್ದಾರೆ. ಇವರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರಿ ಸಂಘ ಮತ್ತು ಬ್ಯಾಂಕಗಳು ನೀಡುವ ಪಿಗ್ಮಿ ಕಮಿಷನ್ ಹೊರತುಪಡಿಸಿ ಯಾವುದೇ ಸವಲತ್ತುಗಳನ್ನು ಸರಕಾರದಿಂದವಾಗಲಿ ಅಥವಾ ಸಹಕಾರಿ ಸಂಘ ಮತ್ತು ಬ್ಯಾಂಕಗಳಿಂದ ಪಡೆದುಕೊಳ್ಳುತ್ತಿಲ್ಲ. ಆದ್ದರಿಂದ ತಮಗೂ ಸಹ ಇತರ ಸರಕಾರಿ ನೌಕರರಂತೆ ಕನಿಷ್ಠ ವೇತನ, ಪಿ.ಎಫ್. ಎಚ್. ಆರ್.ಎ, ಟಿ.ಎ ಮತ್ತು ಡಿ.ಎ. ನೀಡುವಂತೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದರು.
ಸಚಿವ ಅನಂತಕುಮಾರ ಮನವಿ ಸ್ವೀಕರಿಸಿ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪಿಗ್ಮಿ ಸಂಗ್ರಹಕಾರರ ಪ್ರಮುಖರ ಸಭೆಯನ್ನು ಏರ್ಪಡಿಸಲು ಕ್ರಮಕೈಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಪಿಗ್ಮಿ ಸಂಗ್ರಹಕಾರರಾದ ದೀಲಿಪ ದಳವಿ, ಪರಶುರಾಮ ನೇಸರಕರ ಮತ್ತು ಅರ್ಜುನ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

loading...