ಸಸಿ ನೆಡುವ ಕಾರ್ಯಕ್ರಮಕ್ಕೆ ಸ್ವಯ ಪ್ರೇರಿತವಾಗಿ ಭಾಗವಹಿಸಿ

0
30
loading...

ಸಸಿ ನೆಡುವ ಕಾರ್ಯಕ್ರಮಕ್ಕೆ ಸ್ವಯ ಪ್ರೇರಿತವಾಗಿ ಭಾಗವಹಿಸಿ
ಗೋಕಾಕ: ‘ಹಸಿರು ಗೋಕಾಕಗಾಗಿ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಒಂದೇ ದಿನದಲ್ಲಿ 25 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಎಲ್ಲರೂ ಸ್ವಯ ಪ್ರೇರಿತವಾಗಿ ಭಾಗವಹಿಸಬೇಕೆಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಅವರು ಶನಿವಾರ ಶ್ರೀಮಠದ ಸಭಾ ಗೃಹದಲ್ಲಿ ಕರವೇ ತಾಲೂಕ ಘಟಕದ ಆಶ್ರಯದಲ್ಲಿ ಒಂದು ದಿನದಲ್ಲಿ 25 ಸಾವಿರ ಸಸಿ ನೆಡುವ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘಟನೆಗಳ ವಿವಿಧ ಇಲಾಖೆಗಳ ಪ್ರಮುಖರ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಆಗಷ್ಟ 13 ರಂದು ನಡೆಯುವ ಕಾರ್ಯಕ್ರಮದಲ್ಲಿ ನಗರದಲ್ಲಿ ಸುಮಾರು 500 ಸಸಿ, ತಾಲ್ಲೂಕಿನ ಮಕ್ಕಳಗೇರಿ, ಪಿ.ಜಿ ಹುಣಶ್ಯಾಳ, ಕಳ್ಳಿಗುದ್ದಿ, ಕೊಣ್ಣೂರ, ಅಕ್ಕತಂಗೇರಹಾಳ, ಮಮದಾಪೂರ, ತವಗ, ಕೊಳವಿ, ಖನಗಾಂವ, ಶಿಲ್ತಿಭಾಂವಿ, ಮದವಾಲ, ಮಿಡಕನಟ್ಟಿ, ಹಳ್ಳೂರ, ವಡೇರಹಟ್ಟಿ, ಹಾಗೂ ಗೋಕಾಕ ನಗರದಲ್ಲಿ ಸೇರಿದಂತೆ ಇನ್ನಿತರ ಕಡೆಗಳಿಗೆ ಒಂದೇ ದಿನ 25000 ಸಾವಿರ ಸಸಿ ನೆಡುವ ಸಂಕಲ್ಪ ಹೊಂದಲಾಗಿದೆ. ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಪರಿಸರ ಸಂರಕ್ಷಣೆ ಮಾಡಿ ಸಸಿಗಳನ್ನು ಉಳಿಸಿ ಬೆಳಸಲು ಕಂಕಣಬದ್ಧವಾಗಬೇಕು. ಇದರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ದಿ, 08 ರಿಂದ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಕಾರ್ಯಕ್ರಮ ಬಗ್ಗೆ ಅರಿವು ಮೂಡಿಸಲಾಗುವುದು, ಅಲ್ಲದೇ ದಿ 11 ರಂದು ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು. ಸಭೆಯಲ್ಲಿ ನಗರಸಭೆಯ ಪರಿಸರ ಅಭಿಯಂತರು ಎಮ್.ಎಚ್. ಗಜಾಕೋಶ, ಅರಣ್ಯಾಧಿಕಾರಿಗಳಾದ ಹಣಮಂತ ಇಂಗಳಗಿ, ಸತೀಶ ಮುಂಗರವಾಡಿ, ಚನ್ನಪ್ಪಾ ಗೌಡಿ, ಕರವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಛಾಯಾ ಗ್ರಾಹಕ ಸಂಘದ ಲಕ್ಷ್ಮಣ ಯಮಕನಮರಡಿ, ಕೃಷ್ಣಾ ಖಾನಪ್ಪನವರ, ಮುಗುಟ ಪೈಲವಾನ, ಮಹಾದೇವ ಮಕ್ಕಳಗೇರಿ ಹನೀಫಸಾಬ ಸನದಿ, ಶಟ್ಟೇಪ್ಪ ಗಾಡಿವಡ್ಡರ, ರಮೇಶ ಕಮತಿ, ಮಲ್ಲಪ್ಪ ತೈಲಪ್ಪಗೋಳ, ರಮೇಶ ಮೇಸ್ತ್ರಿ, ಮುತ್ತೆಪ್ಪಾ ಘೋಡಗೇರಿ, ರಾಜು ಹೊಸಮನಿ, ಫಕೀರಪ್ಪ ಗಣಚಾರಿ, ಸೇರಿದಂತೆ ಅನೇಕರು ಇದ್ದರು.

loading...