ಸೆಪ್ಟೆಂಬರ್ 2 ರಂದು ಉಪಕಾರ ಸ್ಮರಣೋತ್ಸವ

0
30
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಬೆಳಗಾವಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಇದೇ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 6.30 ಗಂಟೆಯಿಂದ 8.30 ಗಂಟೆಯವರೆಗೆ ಮಕ್ಕಳಿಗಾಗಿ ಉಪಕಾರ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೈನ ಮುನಿ ಆಚಾರ್ಯ ದೇವೇಂದ್ರಸಾಗರಜೀ ಮಹಾರಾಜರು ಹೇಳಿದರು.
ಮಂಗಳವಾರ ಪಾಂಗುಳ ಗಲ್ಲಿಯಲ್ಲಿನ ಜೈನ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಅವರಲ್ಲಿ ತಂದೆ ತಾಯಿ ಬಗ್ಗೆ ಪ್ರೀತಿಯ ಮಾತುಗಳು ಕಡಿಮೆಯಾಗುತ್ತಿವೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಅವರ ತಂದೆ ತಾಯಿಯ ಬಗ್ಗೆ ಗೌರವ ಮೂಡಿಸುವ ಮತ್ತು ಅವರು ಮಾಡಿದ ಉಪಕಾರಗಳನ್ನು ಸದಾ ನೆನೆಯುವಂತೆ ಮಾಡುವ ಉಪಕಾರ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇತ್ತಿಚಿನ ದಿನಗಳಲ್ಲಿ ಮೊಬೈಲ್ ಅತೀ ಬಳಕೆಯಿಂದಾಗಿ ಮಕ್ಕಳಲ್ಲಿ ಅವೈಜ್ಞಾನಿಕ ಬೆಳವಣಿಗೆಯಾಗುತ್ತಿವೆ. ಅವರಲ್ಲಿ ಸಂಸ್ಕಾರ ಮೂಡಿಸಬೇಕೆಂದರೆ ಮೊದಲು ಮಕ್ಕಳಲ್ಲಿ ವಿಶ್ವಾಸ ಬೆಳೆಸಿಕೊಳ್ಳಬೇಕು. ಸಂಬಂಧಗಳು ಇನ್ನೂ ಹತ್ತಿರವಾಗಬೇಕು . ಆಗ ಮಾತ್ರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಾಧ್ಯ ಎಂದರು.
ಸೆಪ್ಟೆಂಬರ್ 2 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು 1,600 ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ತಂದೆ ತಾಯಿಯರ ಪಾದ ಪೂಜೆ, ಮತ್ತು ಸ್ಮರಣೆ ಈ ಕಾರ್ಯಕ್ರಮಗಳು ನಡೆಯಲಿವೆ. 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹಾಗೂ ಎಲ್ಲ ಜಾತಿ, ಸಮಾಜದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

loading...