ಸೇಡಿನ ರಾಜಕಾರಣಕ್ಕಿಳಿದಿರುವ ಬಿಜೆಪಿ ಪಕ್ಷದ ನಡೆ ಖಂಡನೀಯ

0
24
loading...

ಚನ್ನಮ್ಮ ಕಿತ್ತೂರು : ಪ್ರಧಾನಿ ಮೋದಿ ಆದಾಯ ತೆರಿಗೆ ಇಲಾಖೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡರ ಮೇಲೆ ದ್ವೇಶ ರಾಜಕಾರಣ ಮಾಡುತ್ತಿದ್ದಾರೆಂದು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ಹಬೀಬ ಶೀಲೆದಾರ ಆರೋಪಿಸಿದರು. ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಕಿತ್ತೂರು ತಾಲೂಕ ಕಾಂಗ್ರೆಸ್ ಸಮಿತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಶನಿವಾರ ಮಾತನಾಡಿದ ಅವರು, ಪ್ರಜಾಪ್ರಭುತ್ವನ್ನು ಬಿಜೆಪಿ ಕಗ್ಗೊಲೆ ಮಾಡ ಹೊರಟಿದೆ. ಸರ್ವಾಧಿಕಾರಿ ಧೋರಣೆ ತಾಳಿರುವ ಕೇಂದ್ರ ಸರಕಾರದ ವಿರುದ್ದ ಯಾರು ಧ್ವನಿ ಎತ್ತುತ್ತಾರೋ ಅವರ ವಿರುದ್ದ ಐಟಿ ದಾಳಿ ಅಸ್ತ್ರ ಪ್ರಯೋಗಿಸಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ. ಗುಜರಾತ ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಭಯದಿಂದ ದುರುದ್ದೇಶದಿಂದ ಬಿಜೆಪಿ ವಾಮಮಾರ್ಗದ ಮೂಲಕ ನಮ್ಮ ಪಕ್ಷದ ಶಾಸಕರನ್ನು ಹಿಡಿದಿಡುವ ಪ್ರಯತ್ನವಾಗಿದೆ. ಸೇಡಿನ ರಾಜಕಾರಣಕ್ಕಿಳಿದಿರುವ ಬಿಜೆಪಿ ಪಕ್ಷದ ನಡೆ ಖಂಡನೀಯ. ಪ್ರಜಾಪ್ರಭುತ್ವವನ್ನು ಬಿಜೆಪಿ ಕಗ್ಗೊಲೆ ಮಾಡ ಹೊರಟಿದ್ದು, ಸರ್ವಾಧಿಕಾರಿ ಧೋರಣೆ ತಾಳಿರುವ ಕೇಂದ್ರ ಸರಕಾರದ ವಿರುದ್ದ ಯಾರು ಧ್ವನಿ ಎತ್ತುತ್ತಾರೋ ಅವರ ವಿರುದ್ದ ಐಟಿ ದಾಳಿ ಅಸ್ತ್ರ ಪ್ರಯೋಗಿಸಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ ಎಂದರು. ಕಿತ್ತೂರು ಪಪಂ ಅಧ್ಯಕ್ಷ ಹನೀಪ ಸುತಗಟ್ಟಿ, ಕಾಂಗ್ರೆಸ್ ಮುಖಂಡರಾದ ರಾಜಾಸಲಿಂ ಕಾಶಿಂನ್ನವರ, ಶಂಕರ ಹೊಳಿ, ವಿಜಯಕುಮಾರ ಶಿಂಧೆ, ರಮೇಶ ಮೊಕಾಶಿ, ಅಶೊಕ ಮಾಳಗಿ, ಅಡಿವೆಪ್ಪ ಗೋಣಿ, ಸಾವಂತ ಕಿರಬ್ಬನ್ನವರ, ರಮೇಶ ತಳವಾರ, ಹನುಮಂತ ಮುಂದಿನಮನಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು. ರಾಣಿ ಚನ್ನಮ್ಮಾ ವರ್ತುಳದಿಂದ ತಹಶೀಲ್ದಾರ ಕಾರ್ಯಲಯದವರೆಗೂ ಕೇಂದ್ರ ಸರಕಾರದ ವಿರುದ್ದ ದಿಕ್ಕಾರ ಕೂಗುತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರಟಿಭಟನಾಕಾರರು ಇಲ್ಲಿಯ ತಹಶೀಲ್ದಾರ ಮೂಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

loading...