ಅಂದರ್ ಬಾಹರ್ ಆಡುತ್ತಿದ್ದ 15 ಜನ ಅಂದರ್

0
21
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ 15 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ ನಗರದ ನಿವಾಸಿಗಳಾದ ಶಂಕರ ಗೋಪಾಲ ಜಾಲಗಾರ, ಸಾಗರ ಚನ್ನಸ್ವಾಮಿ ರಜಪೂತ, ಸಂತೋಷ ಶಂಕ್ರಪ್ಪಾ ಲಮಾಣಿ, ಕೃಷ್ಣಾ ಶಿವಾಯ ಬೇಡೆಕಾ, ಕಿರಣಸಿಂಗ ರತನಸಿಂಗ ರಜಪೂತ, ಕಿಟ್ಟು ಜೋಗೆಂದ್ರಸಿಂಗ್ ರಜಪೂತ, ಮಹ್ಮಮಅಲಿ ಬಸೀರ ಶೇಖ, ಪ್ರಸಾದ ಅಮೃತ ಪವಾರ, ಗೌರವ ಸುರೇಶ ಅನಿಗೋಳ, ಪ್ರತಾಪಸಿಂಗ ಚತುರಸಿಂಗ ರಜಪೂತ, ವಿಪುಲ ಸದಾನಂದ ಕಾಂಬಳೆ, ವಿಷ್ಣು ಲಕ್ಷ್ಮಣ ಬಾಂಡಗೆ, ಅನಿಲ ಚೆನ್ನಸ್ವಾಮಿ ರಜಪೂತ, ದೀಪ ರಾಜು ರಜಪೂತ ಮತ್ತು ಮಹೇಶ ಶಂಕರ ಕಿತವಾಡ್ಕರ ಬಂಧಿತರು. ಇವರಿಂದ 50 ಸಾವಿರ ರೂ. ಮೌಲ್ಯ ಎರಡು ಮೊಬೈಲ್, 25 ಸಾವಿರ ರೂ. ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಖಾನಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...