ಅಕ್ರಮ ಮದ್ಯ ಮಾರಾಟ: ನಾಲ್ವರ ಸೆರೆ

0
20
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಚಿಕ್ಕೋಡಿ, ರಾಯಬಾಗ ತಾಲೂಕಿನ ಚಂದೂರ, ನಿಪನಾಳ ಮತ್ತು ಚಿಂಚಲಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಬಂಧಿಸಿದ್ದಾರೆ.

ಚಂದೂರದ ದಿಲೀಪ ಬಾಳು ಕಾಂಬಳೆ, ನಿಪನಾಳದ ಅಜ್ಜಪ್ಪ ಬಡಕಪ್ಪ ಡೊನಗ, ಅರಬಣ್ಣ ಮಳೆಪ್ಪ ನಂದಿ, ಶಿರಗೂರದ ಭೀಮಪ್ಪ ಸತ್ಯಪ್ಪ ತಮದಡ್ಡಿ ಬಂಧಿತರು. ಇವರಿಂದ 6250 ರೂ. ಮೌಲ್ಯದ ಮದ್ಯ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಅಂಕಲಿ, ರಾಯಬಾಗ ಮತ್ತು ಕುಡಚಿ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...