ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

0
22
loading...

ಕನ್ನಡಮ್ಮ ಸುದ್ದಿ
ಪಾಲಭಾವಿ 04: ಸಮೀಪದ ಅಪ್ರಾಪ್ತ ಬಾಲಕಿ ಮೇಲೆ ಯುವಕನೊರ್ವ ಅತ್ಯಾಚಾರ ಮಾಡಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರವೆಸಗಿದ ವಿಡಿಯೊ ಮೊಬೈಲ್‍ನಲ್ಲಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ, 9ನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಗ್ರಾಮದ ಲಕ್ಷ್ಮಣ(ಸಿಂಧೂರ) ದುಂಡಪ್ಪ ಮೆಳವಂಕಿ ಅತ್ಯಾಚಾರವೆಸಗಿದ್ದಾನೆ. ಕಳೆದ 2 ತಿಂಗಳಿಂದ ಈ ಅಸಹ್ಯ ಕೃತ್ಯ ನಡೆದಿದ್ದು, ಈ ದೃಶ್ಯವನ್ನು ಅತನ ಸ್ನೇಹಿತ ಮುತ್ತಪ್ಪ ಬೆಳಗಲಿ ವಿಡಿಯೋ ಮಾಡಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮುತ್ತಪ್ಪ ಬೆಳಗಲಿ ಎಂಬಾತನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಹಾರೂಗೇರಿ ಪೋಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಹಾರೂಗೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‍ಐ ಮಹಮ್ಮದ್ ರಫೀಕ್ ತಹಶೀಲ್ದಾರ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ.

loading...