ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಆಸ್ತಿ: ಮಾಣಿಕ್ಯಂ

0
32
loading...

ರಾಮದುರ್ಗ. ಕಾಂಗ್ರೆಸ್ ಪಕ್ಷದ ಆಸ್ತಿ ಎಂದರೆ ಕಾರ್ಯಕರ್ತರು ಎಲ್ಲರೂ ಒಂದಾಗಿ ತಮ್ಮಗೆ ವಹಿಸಿದ ಭೂತ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ರಾಮದುರ್ಗದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅಶೋಕ ಪಟ್ಟಣವರನ್ನು ಮೂರನೆ ಭಾರಿಗೆ ಆಯ್ಕೆ ಮಾಡಲು ಎಲ್ಲರೂ ಶ್ರಮಿಸಬೇಕೆಂದು, ಎ.ಐ.ಸಿ.ಸಿ ಕಾರ್ಯಧರ್ಶಿ ಮಾಣಿಕ್ಯಂ ಟ್ಯಾಗೂರ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಗೊಡಚಿ ಗ್ರಾಮದ ರಾಮು ಅಜ್ಜನವರ ಕಲ್ಯಾಣ ಮಂಟಪದಲ್ಲಿ ರಾಮದುರ್ಗ ತಾಲೂಕಾ ಭೂತ ಮಟ್ಟದ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಅನೇಕ ಜನಪರ ಕಾರ್ಯಗಳನ್ನು ಹಮ್ಮಿಕೊಂಡು ಚುನಾವಣೆ ಕೊಟ್ಟ ಪ್ರನಾಳಿಕೆಯಲ್ಲಿ ನೀಡಿರುವ 165ರಲ್ಲಿ ನೀಡಿದ ಭರವಸೆಯಲ್ಲಿ ಸುಮಾರು 155 ಕಾರ್ಯಕ್ರಮಗಳನ್ನು ನೀಡಿದೆ.
ರಾಜ್ಯ ಸರ್ಕಾರ ಮಾಡಿದ ಸಾಧನೆಗಳನ್ನು ತಿಳಿಸುವ ಕಾರ್ಯವನ್ನು ಸೆ 23 ರಿಂದ ಕಾಂಗ್ರೆಸ್ ಪಕ್ಷದ ನಡಿಗೆ ಮತದಾರರ ಮನೆ ಮನೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಭೂತ ಮಟ್ಟದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವಂತಾ ಕಾರ್ಯವನ್ನು ಮಾಡಬೇಕು. ಭೂತ ಮಟ್ಟದಲ್ಲಿ ಅತಿ ಹೆಚ್ಚು ಮತದಾನ ಮಾಡಿಸಿದ ಸದಸ್ಯರಿಗೆ ನಾವು ಮುಂದಿನ ದಿನಗಳಲ್ಲಿ ಅರ್ಥಿಕ ಹಾಗೂ ಪಕ್ಷದಲ್ಲಿ ಸೂಕ್ತವಾದ ನೀಡಲಾಗುವುದು.
ರಾಜ್ಯದ ಇತಿಹಾಸದಲ್ಲಿ ನಿಮಗೆ ಯಾರು ಬೇಕು ಅಭಿವೃದ್ದಿ ಮಾಡಿದಂತಹ ಸಿದ್ದರಾಮಯ್ಯನವರು ಬೇಕೆ ಅಥವಾ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಜೈಲು ಸೇರಿದ ಯಡಿಯೂರಪ್ಪ ಬೇಕೊ ನಿವೆ ಅರ್ಥ ಮಾಡಿಕೊಂಡು ಮತದಾನ ಮಾಡಬೇಕು.
ತಾಲೂಕಿನಲ್ಲಿ ಉತ್ತಮ ಜನಪರ ಕೆಲಸ ಮಾಡಿದ ಅಶೋಕ ಪಟ್ಟಣವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕೆಂದು ಹೇಳಿದರು.
ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ ಭೂತ ಮಟ್ಟದ ಕಾರ್ಯಕರ್ತರು ನಮ್ಮ ಸರ್ಕಾರ ಮಾಡಿ ಅಭಿವೃದ್ದಿ ಕಾರ್ಯವನ್ನು ತಿಳಿಸುವಂತಾ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಿ.ಪಿ.ಸಿ.ಸಿ ಕಾರ್ಯಧರ್ಶಿ ಪಿ.ವಿ.ಮೋಹನ, ದಯಾನಂಧ ಪಾಟೀಲ, ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲ ಪಂಚಾಯತ ಸದಸ್ಯರಾದ ಕೃಷ್ಣಾ ಲಮಾಣಿ, ಜಹೂರ ಹಾಜಿ. ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಬಂಡಿವಡ್ಡರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪರಪ್ಪ ಜಗವಾಡ, ಪುರಸಭೆಯ ಅಧ್ಯಕ್ಷ ರಾಜು ಮಾನೆ, ಸಣ್ಣ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯನಿಗಮದ ನಿದೇರ್ಶಕ ಮಹಮ್ಮದ ಶೆಫೀ ಬೆಣ್ಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

loading...