ಕಿತ್ತೂರು-ಖಾನಾಪುರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸಚಿವ ಸ್ಥಾನ ಸಿಕ್ಕಿದೆ: ಅನಂತಕುಮಾರ ಹೆಗಡೆ

0
33
loading...

ಖಾನಾಪುರ: ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಆಶೀರ್ವಾದದಿಂದ ತಾವು ಇತ್ತೀಚೆಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಲೋಕಸಭಾ ಚುನಾವಣೆಗಳಲ್ಲಿ 5 ಸಲ ತಮ್ಮನ್ನು ಗೆಲ್ಲಿಸಿದ ಉಭಯ ಕ್ಷೇತ್ರಗಳ ಮತದಾರರಿಗೆ ತಾವು ಕೃತಜ್ಞರಾಗಿರುವುದಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಲೋಕಮಾನ್ಯ ಸಭಾಗೃಹದಲ್ಲಿ ಬಿಜೆಪಿ ಖಾನಾಪುರ ಬ್ಲಾಕ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಬಿಜೆಪಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗುಡ್ಡಗಾಡು ಮತ್ತು ಅರಣ್ಯ ಪ್ರದೇಶವನ್ನು ಸುತ್ತುವರೆದ ಖಾನಾಪುರ ತಾಲೂಕು ಉದ್ಯಮಶೀಲತೆಯಲ್ಲಿ ಹಿಂದುಳಿದಿದ್ದು, ತಾಲೂಕಿನ ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ದೊರೆಯುವಂತೆ ಮತ್ತು ತಾಲೂಕಿನ ಪ್ರತಿಭಾವಂತ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಸಿಗುವಂತೆ ಮಾಡಲು ತಾವು ಅಗತ್ಯ ಯೋಜನೆ ರೂಪಿಸುವುದಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ಮತ್ತಿತರರು ನೂತನ ಸಚಿವ ಹೆಗಡೆ ಅವರನ್ನು ಅಭಿನಂದಿಸಿದರು.
ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಠ್ಠಲ ಹಲಗೇಕರ, ವಲ್ಲಭ ಗುಣಾಜಿ, ಪ್ರಮೋದ ಕೊಚೇರಿ, ಸಂಜಯ ಕುಬಲ, ಬಾಬುರಾವ್ ದೇಸಾಯಿ, ಅಪ್ಪಯ್ಯ ಕೋಡೊಳಿ, ಸಂಜಯ ಕಂಚಿ, ಮಾರುತಿ ಟಕ್ಕೇಕರ, ರವಿ ಬನೋಶಿ, ಜಿತೇಂದ್ರ ಮಾದಾರ, ಸುರೇಶ ಮ್ಯಾಗೇರಿ, ಸಂತೋಷ ಹಡಪದ, ಜ್ಯೋತಿಬಾ ಭರಮಪ್ಪನವರ, ಧನಶ್ರೀ ದೇಸಾಯಿ, ಮಂಜುಳಾ ಕಾಪ್ಸೆ ಇದ್ದರು.

loading...