ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಿ: ಜಗದೀಶ

0
32
loading...

ಬೆಳಗಾವಿ: ಇಂದಿನ ದಿನಗಳಲ್ಲಿ ಯುವಕರು ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಬೇಕು ಸರಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಸಾಕಷ್ಟು ಸೌಲಭ್ಯಗಳನ್ನು ಕ್ರೀಡೆಗೆ ನೀಡಲು ಮುಂದಾಗಿದ್ದು. ಯುವಕರು ಸರಿಯಾದ ಪ್ರಯೋಜನ ಪಡೆಯುತ್ತಿಲ್ಲ. ಶಾರೀರಿಕವಾಗಿ ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಕ್ರೀಡೆ ಅವಶ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗ ನಿರ್ದೇಶಕರಾದ ಜಗದೀಶ ಗಸ್ತಿ ಹೇಳಿದರು.
ನಗರದ ರಾಣಿಚನ್ನಮ್ಮಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮರಾಠಾ ಮಂಡಳ ಮಹಾವಿದ್ಯಾಲಯದಲ್ಲಿ ಸೋಮವಾರ ಆಂತರಿಕ ಮಹಾವಿದ್ಯಾಲಯಗಳ ಚೆಸ್ ಟೂರಾನಾಮೆಂಟ್ ಕ್ರೀಡಾ ಸ್ಪರ್ದೆಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಅದ್ಯಕ್ಷತೆ ವಹಿಸಿದ್ದ ಡಾ. ಎ ಬಿ. ಪವಾರ ಮಾತನಾಡಿ, ಕ್ರೀಡೆಯಲ್ಲಿ ಬಹುಮಾನ ಗಿಟ್ಟಿಸುವುದು ಮುಖ್ಯವಲ್ಲ ಭಾಗವಹಿಸುವದು ಅತ್ಯಂತ ಮುಖ್ಯ ಯುವಕರು ಕ್ರೀಡೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿದರು.
ಈ ಕಾರ್ಯಕ್ರಮದಲ್ಲಿ ಸುರೇಖಾ ಕಾಮುಲೆ ಸ್ವಾಗತಿಸಿದರು. ರಾಮಚಂದ್ರ ತೇಲಿ ಪರಿಚಯಿಸಿದರು. ಎಸ್ ಎಸ್. ಚವ್ಹಾಣ, ರಾಮಾ ಮಾಸ್ತಿಹೊಳಿ, ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಪಾಟೀಲ, ಮಧು ಚೌಗಲೆ ಉಪಸ್ಥಿತರಿದ್ದರು ಹಾಗೂ ರೇಖಾ ಬಾವಡೆಕರ್ ನಿರೂಪಿಸಿದರು. ಜಿ ಎಮ್. ಕರ್ಕಿ ವಂದಿಸಿದರು.

 

 

loading...