ಗಂಗಾವತಿಯಲ್ಲೊಂದು ಸರಕಾರಿ ಹೈಫೈ ಆಸ್ಪತ್ರೆ

0
29
loading...

ಬಡ ರೋಗಿಗಳ ಪಾಲಿನ ದೇವಾಲಯ

ಕೊಪ್ಪಳ: ಸರಕಾರಿ ಆಸ್ಪತ್ರೆಗಳೆಂದರೆ ಜನಸಾಮಾನ್ಯರು ಮೂಗು ಮುರಿಯುವುದು ಸಹಜ. ಅವ್ಯವಸ್ಥೆ ಸೇವಾ ನ್ಯೂನ್ಯತೆಗಳಿಂದಾಗಿ ಸಾಕಷ್ಟು ಸರಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ತಾಣಗಳ:ಆಗಿವೆ ಆದರೆ, ಇವೆಲ್ಲವುದಕ್ಕೆ ಅಪವಾದ ಎಂಬಂತೆ ಗಂಗಾವತಿ ಸರಕಾರಿ ಉಪವಿಭಾಗ ಆಸ್ಪತ್ರೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಡವರ ಅಚ್ಚುಮೆಚ್ಚಿನ ಆಸ್ಪತ್ರೆಯಾಗಿದೆ.

ಉಪವಿಭಾಗ ಆಸ್ಪತ್ರ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿಯವರ ಶ್ರಮದಿಂದಾಗಿ ಸರಕಾರಿ ಆಸ್ಪತ್ರೆಯೊಂದು ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿಗೆ ವಿಶೇಷ ಅಧಿಕಾರಿಯಾಗಿ ಆಗಮಿಸಿದ ಈಶ್ವರ ಸವಡಿ ಸಾಕಷ್ಟು ಆಸ್ಥೆವಹಿಸಿ ಆಸ್ಪತ್ರೆಯನ್ನು ಪುನರ್ಜೀವಗೊಳಿಸಿದ್ದಾರೆ. ಅವ್ಯವಸ್ಥೆ ಆಗರವಾಗಿದ್ದ ಸರಕಾರಿ ಆಸ್ಪತ್ರೆ ಇಂದು ಸುಸಜ್ಜಿತವಾಗಿದೆ. ಬಡ ರೋಗಿಗಳಿಗೆ ಅಗತ್ಯ ಸೇವೆ ದೊರೆಯುತ್ತಿದ್ದು ಶಸ್ತ್ರ ಚಿಕಿತ್ಸೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗೆ ಮಹಿಳೆಯೊಬ್ಬರ ಗರ್ಭಾಶಯದಿಂದ ಶಸ್ತ್ರಚಿಕಿತ್ಸೆ ಮೂಲಕ 6.5 ಕೆಜಿ ಗಾತ್ರದ ದುರ್ಮಾಂಸದ ಗಡ್ಡೆಯನ್ನು ಇಲ್ಲಿನ ವೈದ್ಯರ ತಂಡ ತೆಗೆಯುವಲ್ಲಿ ಯಶಸ್ವಿಯಾಗಿದೆ. ಪ್ರಯೋಗಾಲಯ, ಔಷಧಾಲಯಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ಬಡರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇನ್ನು ಆಸ್ಪತ್ರೆಯ ಸ್ವಚ್ಛತೆಯೆಡೆಗೆ ಹೆಚ್ಚು ಗಮನ ಹರಿಸುವ ಸಿಬ್ಬಂದಿ ರೋಗಿಗಳೊಂದಿಗೂ ಉತ್ತಮವಾಗಿ ವ್ಯವಹರಿಸುತ್ತಾರೆ ಎಂಬುದು ರೋಗಿಗಳ ಪ್ರಶಂಸೆ. ಸದ್ಯಕ್ಕೆ ಸರಕಾರಿ ಉಪವಿಭಾಗ ಆಸ್ಪತ್ರೆಯನ್ನು ಎಲ್ಲಾ ರೀತಿಯ ಔಷಧಿ ಹಾಗೂ ಚಿಕಿತ್ಸೆ ದೊರೆಯುತ್ತಿದ್ದು ಡಾ. ಈಶ್ವರ ಸವಡಿಯವರ ಶ್ರಮದಿಂದಾಗಿ ಸರಕಾರಿ ಆಸ್ಪತ್ರೆಯೂ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

loading...