ಗಾಂಜಾ ಮಾರಾಟ: ಓರ್ವ ಸೆರೆ, ನಗದು ವಶ 

0
24
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಸೆ.15 ರಂದು ಖಚಿತ ಮಾಹಿತಿ ಆಧರಿಸಿ ಸಿಐಡಿ ಬೆಳಗಾವಿ ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀಧರ ವಿ. ಸಾತಾರೆ ನೇತೃತ್ವದಲ್ಲಿ ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ವಿಧ್ಯಾನಗರ ಕ್ರಾಸ್ ಡೊಂಬಾರಿ ಚಾಳ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ್ದಾರೆ.

ಖಾನಾಪೂರ ತಾಲೂಕಿನ ಸಂಗರಗಾಳಿ ಗ್ರಾಮದ ಆಸ್ಟಿನ್ ದುಮಿಂಗ್ ಮಸ್ಕರನೆಸ್ ಬಂಧಿತ. ಈತ ಖಾನಾಪೂರ ನಗರದ ವಿಧ್ಯಾನಗರ ಡೊಂಬಾರಿಚಾಳ ನಿವಾಸಿಯಾಗಿದ್ದಾನೆ. ಈತನಿಂದ 23,200 ರೂ. ಮೌಲ್ಯದ 1 ಕಿಲೋ 160 ಗ್ರಾಂ ಗಾಂಜಾ, 220 ರೂ. ನಗದು ಮತ್ತು ಒಂದು ಮೊಬೈಲ್ ಪೋನನ್ನು ಜಫ್ತು ಮಾಡಿದ್ದಾರೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಎನ್‍ಡಿಸಿ, ಸಿಐಡಿ ಬೆಳಗಾವಿ ಘಟಕದ ಅಧಿಕಾರಿ, ಸಿಬ್ಬಂದಿಗಳಾದ ಬಿ.ಎನ್.ಮೋದಗಿ, ಬಿ.ಎನ್.ಹಿರೇಮಠ, ಆರ್.ಬಿ.ಗಡವೀರ, ಜೆ.ಎಂ.ಬಾಗನವರ ಜಿ.ಆರ್.ಶಿರಸಂಗಿ ಭಾಗವಹಿಸಿದ್ದರು ಎಂದು ಬೆಳಗಾವಿ ಸಿಐಡಿಯ ಮಾದಕ ವಸ್ತುಗಳ ನಿಯಂತ್ರಣ ಘಟಕದ ಪೋಲಿಸ್ ಇನಸ್ಪೇಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...