ಗೌರಿ ಲಂಕೇಶ್ ಹತ್ಯೆ: ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದ ಪೊಲೀಸರು

0
23
loading...

ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಗೌರಿ ಲಂಕೇಶ್ ನಿವಾಸ ಸೇರಿದಂತೆ ಘಟನೆ ನಡೆದ ರಾಜರಾಜೇಶ್ವರಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಘಟನೆ ನಡೆದ ಸಂದರ್ಭದದಲ್ಲಿ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿರುವ ಸುಮಾರು 10 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಗೌರಿ ಲಂಕೇಶ್ ಅವರ ನಿವಾಸದ ಬಳಿ ಇರುವ ಮೊಬೈಲ್ ಟವರ್ ಗಳ ದತ್ತಾಂಶಗಳ ಸಂಗ್ರಹಕ್ಕೂ ಪೊಲೀಸರು ಮುಂದಾಗಿದ್ದು, ಗೌರಿ ಲಂಕೇಶ್ ಹತ್ಯೆಯಾಗುವ ಮುನ್ನ ಹಾಗೂ ಹತ್ಯೆಯಾದ ಬಳಿಕ ದುಷ್ಕರ್ಮಿಗಳು ಮಾಡಿರಬಹುದಾದ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪ್ರಮುಖವಾಗಿ ಗೌರಿ ಲಂಕೇಶ್ ಅವರ ನಿವಾಸ ಇರುವ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ಸುತ್ತಮುತ್ತಲ ಟವರ್ ಗಳ ದತ್ತಾಂಶವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

loading...