ದಕ್ಷಿಣ ವಲಯ ಈಜು ಸ್ಪರ್ಧೆಯಲ್ಲಿ ಮಂದಾರಗೆ ತೃತೀಯ ಸ್ಥಾನ

0
37
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ತಾನಾಜಿ ಗಲ್ಲಿಯ ಮಂದಾರ ದೇಸೂಕರ ಇತ್ತೀಚೆಗೆ ನಾಗ್ಪುರದಲ್ಲಿ ನಡೆದ 17 ವರ್ಷದ ಒಳಗಿನ ರಾಷ್ಟ್ರ ಮಟ್ಟದ ದಕ್ಷಿಣ ವಲಯದ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡದಿದ್ದಾನೆ.
ಕೆಎಲ್‍ಇ ಇಂಟರ್‍ನ್ಯಾಷಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಮಂದಾರ ದೇಸೂಕರ 9ನೇಯ ತರಗತಿಯಲ್ಲಿ ಓದುತ್ತಿದ್ದಾನೆ. ಈಜು ಸ್ಪರ್ಧೆಯಲ್ಲಿ 9 ರಾಜ್ಯಗಳ 1500 ವಿದ್ಯಾರ್ಥಿಗಳು ಭಾಗವಹಿಸಿದರು. 200 ಮೀಟರ್ ಉದ್ದ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡಿಕೊಂಡಿದ್ದಾನೆ. ಶಾಲೆಯ ಮುಖ್ಯಶಿಕ್ಷಕಿ ದೀಪ್ತಿ ಇಂಗಳೆ, ತರಬೇತಿದಾರರಾದ ಗುರುಪ್ರಸಾದ ಟಂಗನಕರ ಮತ್ತು ಉಮೇಶ ಕಲಘಟಗಿ ಅಭಿನಂದಸಿದ್ದಾರೆ.

loading...