ದೀನ್ ದಯಾಳ ಅಧ್ಯಯನ ಪೀಠಕ್ಕೆ ಕೇಂದ್ರದಿಂದ 5.7 ಕೋಟಿ ಅನುದಾನ: ಕುಲಪತಿ ಹೊಸಮನಿ

0
19
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ದೀನ್ ದಯಾಳ ಉಪಾಧ್ಯಾಯರ ಅಧ್ಯಯನ ಪೀಠವನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ 5.7 ಕೋಟಿಯನ್ನು ಅನುದಾನ ನೀಡಿದೆ. ಇದು ಕೇವಲ ಸಂಶೋಧನಾ ಕೇಂದ್ರ ಮಾತ್ರವಲ್ಲ, ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಎಂದು ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ದೀನ್ ದಯಾಳ ಉಪಾಧ್ಯಾಯರ 101ನೆಯ ಜನ್ಮ ದಿನಾಚರಣೆಯನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀನ್ ದಯಾಳ ಉಪಾಧ್ಯಾಯರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೀಡಿದ್ದಾರೆ. ಗ್ರಾಮೀಣ ಬಡ ಜನರ ಅಭಿವೃದ್ಧಿಗಾಗಿ ಶ್ರಮಿಸಿದರು ಮತ್ತು ತತ್ವಜ್ಞಾನ ಹಾಗೂ ಮಾನವೀಯತೆಯ ಆಧಾರದ ಮೇಲೆ ದೀನ್ ದಯಾಳರು ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದರು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರು ಪ್ರೊ. ಸಿದ್ದು ಪಿ. ಆಲಗೂರ, ವಿತ್ತಾಧಿಕಾರಿಗಳಾದ ಪರಶುರಾಮ ದುಡಗುಂಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಎಂ. ಆರ್. ನಿಂಬಾಳ್ಕರ್, ಬಸವರಾಜ ಚಿಕ್ಕನಗೌಡರ, ಡಾ. ಬಿ. ಜಿ. ಹೆಗಡೆ, ಪ್ರಾಧ್ಯಾಪಕರ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

loading...