ದೇಗಾಂವ ಹೊನ್ನಾಪೂರ ಅರಣ್ಯ ಚಾತುರ್ಮಾಸದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಗೆಲವು ಸಾಧಿಸಿದ ತಂಡದೊಂದಿಗೆ ಮುನಿಶ್ರೀಗಳು.

loading...

ಕನ್ನಡಮ್ಮ ಸುದ್ದಿಲೋಕಃ ಚನ್ನಮ್ಮ ಕಿತ್ತೂರು
ಇಂದು ಎಲ್ಲ ತರಹದ ಕಲಾಕೌಶಲಗಳು ಮುಂದೆವರೆದಿವೆ ಸರ್ವರು ಸಂಸಾರದಲ್ಲಿ ಸುಃಖಿಯಾಗಿದ್ದಾರೆ ಕಲೆಗಳಿಂದ ಮನುಷ್ಯನ ಕುಶಲತೆ ಶಕ್ತಿ ಹೆಚ್ಚಾಗುತ್ತದೆ ಎಂದು ರಾಷ್ಟ್ರ ಸಂತ 108 ಮುನಿಶ್ರೀ ಚಿನ್ಮಯಸಾಗರ ಜಂಗಲವಾಲೇ ಬಾಬಾ ಹೇಳಿದರು.
ದೇಗಾಂವ ಹೊನ್ನಾಪೂರ ಅರಣ್ಯ ಚಾತುರ್ಮಾಸದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರಿಗೆ ಅಹಿಂಸಕರಾಗಲು ನಶಾಮುಕ್ತರಾಗಲು ದೇಶ ಸಮಾಜ ತಂದೆ ತಾಯಿಗಳ ಸೇವೆ ಮಾಡಬೇಕು. ನಶೆಯಿಂದ ಮನುಷ್ಯನ ಶಕ್ತಿ ಹೀನವಾಗುತ್ತದೆ ದೇಶ ಸಮಾಜದ ಶಕ್ತಿ ಹೀನವಾಗುತ್ತದೆ. ನಶೆಯಿಂದ ಸುವಿಚಾರಗಳು ಸಮಾಪ್ತವಾಗುತ್ತವೆ. ನಶೆ ಸೇವಿಸುವವರು ತಮ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ನಶೆ ಸೇವಿಸುವುದರಿಂದ ಸಮಾಜದಲ್ಲಿ ಗೌರವ ಸಮಾಪ್ತವಾಗುತ್ತ ಹೋಗುತ್ತದೆ. ದುವ್ರ್ಯಸನ ದುರಭ್ಯಾಸಗಳಿಂದ ದಾರಿದ್ರ್ಯ ಹೆಚ್ಚಾಗುತ್ತ ಹೋಗುತ್ತದೆ. ನಶೆಯ ಸೇವನೆಯಿಂದಾಗಿ ಅಪರಾಧಗಳು ಹೆಚ್ಚಾಗುತ್ತಿವೆ. ಸಮಾಜ ಜೀವನದಲ್ಲಿ ಅಸ್ಥಿರತೆಯ ಸಂಚಾರವಾಗುತ್ತಿದೆ. ಮನ ಮನೆ ಪರಿಜನರಲ್ಲಿ ಅಶಾಂತಿ ಹೆಚ್ಚುತ್ತಿದೆ. ಯುವಕ ನಶಾಮುಕ್ತನಾದರೆ ಮಾತ್ರ ದೇಶ ಸಶಕ್ತವಾಗುತ್ತದೆ. ವಿನಾಶ ಮಾರ್ಗವನ್ನು ತೊರೆದು ವಿಚಾರವಂತರಾಗಿರಿ . ದೀನ ದಲಿತರು ಆದಿವಾಸಿಗಳು ದುರಭ್ಯಾಸ ದುವ್ರ್ಯಸನಗಳಿಂದ ಮುಕ್ತರಾಗಿ ತಮ್ಮ ಮುಂದಿನ ಪೀಳಿಗೆಯನ್ನು ಪ್ರಗತಿ ಪಥದಲ್ಲಿ ತಂದುಕೊಳ್ಳಿ. ಸತಯುಗದ ಆರಂಭದಲ್ಲಿ ಆದ್ಯ ತೀರ್ಥಂಕರ ಆದೀನಾಥ ಭಗವಾನರು ಸರ್ವ ಜೀವಿಗಳ ಜೀವಿಕೆಗಳ ನಿರ್ವಹಣೆಗಾಗಿ ಅಸಿ, ಮಸಿ, ಕೃಷಿ, ವಾಣಿಜ್ಯ, ವಿದ್ಯಾ, ಶಿಲ್ಪ ಈ ಆರು ಷಟ್ಕರ್ಮಗಳ ಉಪದೇಶ ಮಾಡಿ ಸರ್ವರ ಉದ್ಧಾರ ಮಾಡಿದ್ದಾರೆ. ಎಂದು ಹೇಳಿದರು.
ಚಿನ್ಮಯಸಾಗರ ಚಾರಿಟೆಬಲ ಟ್ರಸ್ಟನ ಅಧ್ಯಕ್ಷೆ ಸುಮನಲತಾ ಪ್ರಕಾಶ ಮೋದಿ ಉಪಸ್ಥಿತರಿದ್ದರು . ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲ ಆಟಗಾರರನ್ನು ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಲಾಯಿತು . ಪಂದ್ಯಾವಳಿಯಲ್ಲಿ ಹೋನ್ನಾಪುರ , ದೇಗಾಂವ , ತಿಗಡೊಳ್ಳಿ, ಸಾಗರ , ಗಂಗ್ಯಾನಟ್ಟಿ , ನಿಚ್ಚಣಕಿ , ಕತ್ರಿದಡ್ಡಿಯಿಂದ ತಂಡಗಳು ಭಾಗವಹಿಸಿದ್ದರು ನಿರ್ಣಾಯಕರಾಗಿ ಶ್ರೀ ಮಲ್ಲಿಕಾರ್ಜುನ ಹುಕ್ಕೇರಿ ಮತ್ತು ಮೋಹಸಿನ ಸರದಾರ ಪಂದ್ಯಗಳನ್ನು ನೇರವೆರಿಸಿಕೋಟ್ಟರು

loading...