“ ನವೀನ ವಿಷಯಗಳೊಂದಿಗೆ ವರ್ಗ ಕೋಣೆ ಪ್ರವೇಶಿಸಿ: ರಾವಳ್ ಅಭಿಮತ

0
36
loading...

ಚನ್ನಮ್ಮ ಕಿತ್ತೂರು: ಸಮೀಪದ ಸರಕಾರಿ ಪ್ರೌಢಶಾಲೆ ಕತ್ರಿದಡ್ಡಿಯಲ್ಲಿ ನಡೆದ ತಾಲೂಕಾ ಗಣಿತ ಶಿಕ್ಷಕರ ತಿಂಗಳ ಕಾರ್ಯಾಗಾರ ಜರುಗಿತು. ಇಲಾಖೆಯ ಹೊಸ ಹೊಸ ಪ್ರಯೋಗಗಳನ್ನು ಅನ್ವಯಿಸಿಕೊಂಡು ಹೊಸ ವಿಚಾರಗಳೊಂದಿಗೆ ಶಿಕ್ಷಕರು ವರ್ಗ ಕೋಣೆ ಪ್ರವೇಶಿಸಬೇಕು. ನಾನೇನು ಕಲಿಸಿದೆ ಎನ್ನುವದಕಿಂತ ವಿದ್ಯಾರ್ಥಿ ನನ್ನಿಂದ ಏನನ್ನು ಕಲಿತ ಎನ್ನುವದರತ್ತ ಶಿಕ್ಷಕರು ಗಮನ ಹರಿಸಬೇಕೆಂದು” ಜಿಲ್ಲಾ ನೋಡಲ್ ಅಧಿಕಾರಿ ರಾವಳ್ ಹೇಳಿದರು.
ನಂತರ ಮಾತನಾಡಿದ ತಾಲೂಕಾ ನೋಡಲ್ ಅಧಿಕಾರಿ ಸಿ. ಎಮ್. ಪಾಗಾದ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎ. ಕೆ. ಪಾಗಾದ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು ಹೊಳೆಪ್ಪ ಪಾಟೀಲ, ಎನ್. ಬಿ ಉಪ್ಪಿನ, ವ್ಹಿ.ಕೆ ಕಾಜಗಾರ, ಡಿ.ಎಚ್. ಪಾಟೀಲ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜಿ. ಎಫ್. ಬ್ಯಾಟಗೇರ ವಹಿಸಿದ್ದರು. ತಾಲೂಕಿನ ಪ್ರೌಢಶಾಲೆಗಳ ಗಣಿತ ಶಿಕ್ಷಕರು ಉಪಸ್ಥಿತರಿದ್ದು 9ನೇ ವರ್ಗದ ಗಣಿತ ವಿಷಯದ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳೊಂದಿಗೆ ಪ್ರಾಯೋಗಿಕವಾಗಿ ಚರ್ಚಿಸಿದರು.
ಸರಕಾರಿ ಪ್ರೌಢಶಾಲೆ ಕತ್ರಿದಡ್ಡಿ ಪ್ರಾರಂಭವಾಗಿ 10 ವರ್ಷ ಕಳೆದ ಸವಿನೆನಪಿಗಾಗಿ ಪ್ರತಿ ಶಿಕ್ಷಕರಿಗೆ ಮಾವಿನ ಸಸಿಗಳನ್ನು ನೀಡಿ ಪರಿಸರ ಪ್ರೇಮವನ್ನು ಮೆರೆದರು. ಶಿಕ್ಷಕ ಎಮ್.ಪಿ. ಕದಂ ಸ್ವಾಗತಿಸಿದರು. ವ್ಹಿ. ಕೆ. ಕಾಜಗಾರ ವಂದಿಸಿದರು ಭುವನೇಶ್ವರಿ ಹಿರೇಮಠ ನಿರೂಪಿಸಿದರು.

loading...