ಪದ್ಮ ಭೂಷಣ ಪ್ರಶಸ್ತಿಗೆ ಎಂಎಸ್ ಧೋನಿ ಹೆಸರು

0
12
loading...

ನವದೆಹಲಿ:- ದೇಶದ ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ಪ್ರಶಸ್ತಿ ಗಾಗಿ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶಿಪಾರಸ್ಸು ಮಾಡಿದೆ.
ಭಾರತೀಯ ಕ್ರಿಕೆಟ್‍ಗೆ ಧೋನಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಧೋನಿ ಹೆಸರನ್ನು ನಾಮನಿರ್ದೇಶನ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಬಿಸಿಸಿಐ ಮಂಡಳಿ ಸಭೆಯಲ್ಲಿ ಧೋನಿ ಹೆಸರನ್ನು ಶಿಫಾರಸು ಮಾದಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ
ಧೋನಿ ನಾಯಕತ್ವದಲ್ಲಿ ಭಾರತ 2007 ಟ್ವೆಂಟಿ-20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಗೆದ್ದಿತ್ತು.
ಧೋನಿ 302 ಏಕದಿನದಲ್ಲಿ 9737 ರನ್ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್ ಗಳಿಸಿದ್ದಾರೆ. ಅಲ್ಲದೆ 78 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್ ಗಳಿಸಿದ್ದಾರೆ.

loading...