ಪ್ರಕಾಶ್ ಜಾವ್ಡೇಕರ್ ಇಂದು ಬೆಂಗಳೂರಿಗೆ

0
30
loading...

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಅವರು, ಇಂದು ನಗರಕ್ಕೆ ಆಗಮಿಸಲಿದ್ದಾರೆ. ಚುನಾವಣಾ ಸಹ ಉಸ್ತುವಾರಿಯಾಗಿರುವ ಮತ್ತು ಕೇಂದ್ರ ಸಚಿವ ಪಿಯೂಷ್‍ಗೋಯಲ್ ಕೂಡ ನಾಳೆ ನಗರಕ್ಕೆ ಆಗಮಿಸುತ್ತಿರುವುದು ಬಿಜೆಪಿ ಪಾಳೆಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಳೆದ ವಾರವಷ್ಟೇ ಈ ಇಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ನಿಯೋಜನೆಗೊಳಿಸಿದ್ದರು. ಏಕಕಾಲದಲ್ಲಿ ಉಭಯ ನಾಯಕರು ನಗರಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ನಾಯಕರಲ್ಲಿ ಹೊಸ ಹುರುಪು ತುಂಬಿದೆ.ಪಕ್ಷದ ಸಂಘಟನೆ, ಪರಸ್ಪರ ನಾಯಕರಲ್ಲಿ ಹೊಂದಾಣಿಕೆ ಇಲ್ಲದಿರುವುದು, ಸಂಘಟನೆ ಕೊರತೆ ಸೇರಿದಂತ ಹತ್ತು ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಅಮಿತ್ ಶಾ ರಾಜ್ಯ ಉಸ್ತುವಾರಿಗೆ ನೇಮಕಗೊಳಿಸಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ಜಾವ್ಡೇಕರ್ ಆಗಮಿಸಿದರೆ, ನಾಳೆ ಬೆಳಗ್ಗೆ ಗೋಯಲ್ ಬರಲಿದ್ದಾರೆ. ನಾಳೆಯಿಂದ ಉಭಯ ನಾಯಕರು ಎರಡು ದಿನಗಳ ಕಾಲ ರಾಜ್ಯ ನಾಯಕರನ್ನು ಭೇಟಿ ಮಾಡಿ ಪಕ್ಷದ ಸಂಘಟನೆ, ಮುಂದಿನ ವಿಧಾನಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರ, ಚುನಾವಣಾ ಪ್ರಚಾರ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಹೊಸ ತಂತ್ರಗಳನ್ನು ರೂಪಿಸಲಿದ್ದಾರೆ.

loading...