ಪ್ರೇಮಿಗಳು ರಕ್ಷಣೆಗಾಗಿ ಪೊಲೀಸ ಮೊರೆ

0
30
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಪ್ರೀತಿಸಿ ಮನೆ ಬಿಟ್ಟು ಓಡಿಬಂದಿರುವ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಮತ್ತು ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ವಿಷದ ಬಾಟಲಿ ಹಿಡಿದುಕೊಂಡು ಪೊಲೀಸ್‍ರ ಮೊರೆ ಹೋದ ಘಟನೆ ಭಾನುವಾರ ನಡೆದಿದೆ.
ಬಾಳೇಕುಂದ್ರಿ ಗ್ರಾಮದ ರಾಘವೇದ್ರ ಬಾಳಯ್ಯ ಹಿರೇಮಠಯೊಂದಿಗೆ ಯುವತಿ ಐದು ವರ್ಷದಿಂದ ಪ್ರೀತಿಸುವ ವಿಷಯವನ್ನು ಮನೆಯಲ್ಲಿ ಹೇಳಿದ್ದರೂ ಮನೆಯಲ್ಲಿ ಕೇಳದೇ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಕೆಲವು ದಿನಗಳ ನಂತರ ಹೊಡೆದ್ದು ಹಿಂಸೆ ನೀಡುತ್ತ್ತಿದ್ದ ಹಿನ್ನಲೆಯಲ್ಲಿ ಗಂಡನ ಮನೆ ಬಿಟ್ಟು ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಓಡಿಬಂದಿದೇನೆ.

ರಾಘವೇಂದ್ರ ಕಿಡ್ನಾಪ್ ಮಾಡಿದ್ದಾನೆಂದು ರಾಘವೇಂದ್ರನ ತಾಯಿ ಮತ್ತು ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ನನ್ನನ್ನು ಯಾರು ಕಿಡ್ನಿಪ್ಪ ಮಾಡಿಲ್ಲ ಸ್ವ ಇಚ್ಛೆಯಿಂದ ಪ್ರೀತಿಸಿದವನೊಂದಿಗೆ ಬಂದಿದ್ದೇನೆ. ಬಂಧಿಸಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿಂಗಪ್ಪಾ ಬಾಳಪ್ಪಾ ಗುಡನಕಟ್ಟಿ ಎಂಬುವವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ರಕ್ಷಣೆ ಒದಗಿಸಬೇಕು. ಇಲ್ಲದೇ ಹೋದರೆ ವಿಷಸೇವಿಸಿಕೊಂಡು ಆತ್ನಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪೊಲೀಸ ಆಯುಕ್ತರಿಗೆ ತಿಳಿಸಿದ್ದಾರೆ. ಜೀವ ಬೆದರಿಕೆ ಹಾಕುತ್ತಿರುವ ಕುರಿತು ನಗರ ಪೊಲೀಸ ಆಯುಕ್ತರಿಗೆ ದೂರು ನೀಡಿದ್ದಾರೆ.

loading...