ಬರದಲ್ಲೂ ಸಮೃದ್ಧ ತಾಳೆ ಬೆಳೆಬರದಲ್ಲೂ ಸಮೃದ್ಧ ತಾಳೆ ಬೆಳೆ

0
36
loading...

ಕೊಪ್ಪಳ 15 : ತೆಂಗಿನ ಬೆಳೆಯಂತೆ ರೈತರಿಗೆ ಹೆಚ್ಚಿನ ಆದಾಯ ಕೊಡುವ ಹಾಗೂ ಕಡಿಮೆ ನಿರ್ವಹಣೆಯುಳ್ಳ ಬಹು ವಾರ್ಷಿಕ ಬೆಳೆಯಾದ ತಾಳೆ ಬೆಳೆಯನ್ನು ಬರದಲ್ಲೂ ಲಾಭದಾಯಕವಾಗಿ ಬೆಳೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಿ ಗ್ರಾಮದ ರೈತ ಶಂಕರಗೌಡರ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯು ಇತ್ತೀಚಿಗೆ ತೋಟಗಾರಿಕೆ ಬೆಳೆಗಳಿಗೆ ಖ್ಯಾತಿ ಹೊಂದಿದ್ದು. ಇಲ್ಲಿನ ಮಣ್ಣು ಮತ್ತು ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಸೂಕ್ತವಾಗಿದೆ.  ಅಲ್ಲದೇ ಇಲಾಖೆಯ ಅನೇಕ  ಯೋಜನೆಗಳು ರೈತರು ಆರ್ಥಿಕ ಸುಸ್ಥಿರತೆ ಹಾಗೂ ಸ್ವಾಲಂಬನೆಯ ಬದುಕು ಸಾಗಿಸುವಂತಾಗಿದೆ.  ರೈತಪರ ಕಾರ್ಯಕ್ರಮಗಳಾದ ಮಾವು ಮೇಳ, ಸಸ್ಯ ಸಂತೆ ಮುಂತಾದ ಕಾರ್ಯಕ್ರಮಗಳು ರೈತರಷ್ಟೇ ಅಲ್ಲದೆ ಸಾರ್ವಜನಿಕರಿಗೂ ಪ್ರಯೋಜನಕಾರಿಯಾಗಿವೆ.    ತೋಟಗಾರಿಕೆಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಹೊಂದಿದ್ದು, ತೆಂಗಿನ ಜಾತಿಗೆ ಸೇರಿದ ತಾಳೆ ಬೆಳೆಯೂ ಒಂದು.  ತೆಂಗಿನ ಬೆಳೆಯಂತೆ ಇದೂ ಕೂಡ ಹೆಚ್ಚಿನ ಆದಾಯ ಕೊಡುವ ಮತ್ತು ಕಡಿಮೆ ನಿರ್ವಹಣೆಯುಳ್ಳ ಬಹುವಾರ್ಷಿಕ ಬೆಳೆ.  ಅಲ್ಪ ನೀರಿನೊಂದಿಗೆ ನಿಯಮಿತವಾಗಿ ಗೊಬ್ಬರ ಕೊಟ್ಟರೆ ಸಾಕು ಅತ್ಯಂತ ಲಾಭದಾಯಕ ಬೆಳೆ, ತಾಳೆ ಬೆಳೆ ಆಗಿದೆ. ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪಿ ಗ್ರಾಮದ ಶಂಕರಗೌಡ್ರು ಅವರು ಒಬ್ಬ ಪ್ರಗತಿಪರ ರೈತರಾಗಿದ್ದು, ತಮ್ಮ 8.20 ಎಕರೆ ಕೃಷಿ ಜಮೀನಿನಲ್ಲಿ  ಈ ಮೊದಲು  ಜೋಳ, ಹತ್ತಿ, ಶೇಂಗಾ ಮತ್ತು ಇತರೇ ಕೃಷಿ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದರು.  ಇದರಲ್ಲಿ ಇವರಿಗೆ ಹೆಚ್ಚಿನ ಲಾಭ ಕಂಡುಬರದ ಕಾರಣ ಮತ್ತು ಕೂಲಿಕಾರರ ಕೊರತೆಯಿಂದಾಗಿ, ತೋಟಗಾರಿಕೆ ಬೆಳೆಯತ್ತ ಆಸಕ್ತಿ ತೋರಿ ಇಲಾಖೆಯನ್ನು ಸಂಪರ್ಕಿಸಿದಾಗ, ಅವರಿಗೆ ಸರ್ಕಾರದ “ಸಾಮಥ್ರ್ಯವುಳ್ಳ ಎಣ್ಣೆ ತಾಳೆ ಯೋಜನೆಯು” ಇಲಾಖೆ ಮತ್ತು ಖಾಸಗಿ ಸಂಸ್ಥೆಯವರೊಂದಿಗೆ (ಪಿ.ಪಿ.ಪಿ) ಒಡಗೂಡಿ ಅನುಷ್ಠಾನಗೊಳಿಸುತ್ತಿರುವುದನ್ನು ತಿಳಿದು, ತಾಳೆ ಬೆಳೆಯಲು ಮುಂದಾದರು. ಈ ಭಾಗದಲ್ಲಿ 3ಎಫ್ ಆಯಿಲ್ ಪಾಮ್ ಅಗ್ರೋಟೆಕ ಖಾಸಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಿಂದಲೇ ಉತ್ಕøಷ್ಟ ತಾಳೆ ಸಸಿಗಳನ್ನು ವಿತರಿಸಲಾಗುತ್ತಿದೆ.  ಸಂಸ್ಥೆಯ ಕ್ಷೇತ್ರ ಸಹಾಯಕರು ರೈತ ಶಂಕರಗೌಡ್ರು ಅವರ ತೋಟಕ್ಕೆ  ಭೇಟಿ ನೀಡಿ,  ನಂತರ ವಿನ್ಯಾಸ ನೀಡಿ 27 ಅಡಿ ಅಂತರದಲ್ಲಿ ತ್ರಿಕೋನ ಆಕಾರದಲ್ಲಿ ತಾಳೆ ಸಸಿಗಳನ್ನು ನಾಟಿ ಮಾಡಲು ತಿಳಿಸಿದರು.  ಶಂಕರಗೌಡ್ರು ಅವರು ತಮ್ಮ 8.20 ಎಕರೆ ಜಮೀನಿನ ಪೈಕಿ 5 ಎಕರೆ ಪ್ರದೇಶದಲ್ಲಿ ಒಟ್ಟು 290 ತಾಳೆ ಸಸಿಗಳನ್ನು ನಾಟಿ ಮಾಡಿದರು.  ಇದರ ಜೊತೆಗೆ ಇಲಾಖೆಯಿಂದ ಸಹ ಶೇ.50 ರಂತೆ  ನಿರ್ವಹಣೆಗಾಗಿ ಇವರ ತಾಕಿಗೆ ಗೊಬ್ಬರ ವಿತರಣೆ ಮತ್ತು ಯಂತ್ರೋಪಕರಣಗಳಿಗೆ  ಸಹಾಯಧನ  ನೀಡಲಾಯಿತು.   ನಾನು ಇಲಾಖೆ ಮತ್ತು ಖಾಸಗಿ ಸಂಸ್ಥೆಯವರ ಮಾರ್ಗದರ್ಶನದಂತೆ ತಾಳೆ ಬೆಳೆಯನ್ನು ಬೆಳೆಯುತ್ತಿದ್ದೇನೆ.  ಅಲ್ಲದೇ ಹಾಲು ಉತ್ಪಾದನೆಗೋಸ್ಕರ ಏಳು ಎಮ್ಮೆಗಳನ್ನು ಸಾಕಿದ್ದೇನೆ.  ಈ ಜಾನುವಾರುಗಳ ನಿರ್ವಹಣೆಗೆ ಇನ್ನುಳಿದ ಮೂರು ಎಕರೆ ಜಮೀನಿನಲ್ಲಿ ಮೇವು ಬೆಳೆದಿದ್ದೇನೆ.  ಇದರ ಜೊತೆಯಲ್ಲಿಯೇ 100 ಕೋಳಿ ಸಾಕಾಣಿಕೆಯನ್ನು  ಸಹ ಕೈಗೊಂಡಿದ್ದು, ತೋಟದ ಬದುವಿನಲ್ಲಿ 15 ತೆಂಗು 4 ನಿಂಬೆ ಗಿಡಗಳನ್ನು ಹಾಕಿದ್ದೇನೆ.  ಒಟ್ಟಾರೆಯಾಗಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದೇನೆಂದು ಹೇಳಿದ್ದಾರೆ ರೈತ ಶಂಕರಗೌಡ್ರು ಅವರ ಆರ್ಥಿಕ ಅಭಿವೃದ್ಧಿಯಿಂದಾಗಿ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದೆ.  ಹೀಗಾಗಿ ಇವರು ಒಬ್ಬ ಮಾದರಿ ರೈತರಾಗಿದ್ದಾರೆ.  ಕಡಿಮೆ ನಿರ್ವಹಣೆಯಲ್ಲಿ  ತಾಳೆ ಬೆಳೆಯನ್ನು ಸಮರ್ಪಕವಾಗಿ ಬೆಳೆಯಬಹುದೆಂದು ಸಾಬೀತುಪಡಿಸಿ, ಇತರೆ ರೈತರಿಗೆ ಮಾದರಿಯಾಗಿದ್ದಾರೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ನಿರ್ದೇಶಕರು (ತಾಳೆ ಬೆಳೆ ಯೋಜನೆ) ಕೊಪ್ಪಳ ಅವರು.   ಹೆಚ್ಚಿನ ಮಾಹಿತಿಗಾಗಿ ಶಂಕರಗೌಡ್ರು ಮೊಬೈಲ್ ನಂಬರ  9901622550, ಹಾರ್ಟಿಕ್ಲಿನಿಕ್   ವಿಷಯ ತಜ್ಞರು ವಾಮನಮೊರ್ತಿ 9482672039 ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ (ತಾಳೆ ಬೆಳೆ ಯೋಜನೆ) ಕಛೇರಿ ಇವರನ್ನು  9900775894 ಮತ್ತು 9886200574 ಕ್ಕೆ  ಸಂಪರ್ಕಿಸಬಹುದಾಗಿದೆ.

loading...